ದೇಶ

ಗುಜರಾತ್ ಮಾದರಿ ಅಲುಗಾಡಿದೆ, 2019 ರಲ್ಲಿ ಬಿಜೆಪಿ ಕುಸಿಯದಿರಲಿ: ಶಿವಸೇನೆ

ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ವಿರುದ್ಧ ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಟೀಕೆ ಮಾಡಿದ್ದು ಗುಜರಾತ್ ಮಾದರಿ ಅಲುಗಾಡಿದೆ ಎಂದು ಹೇಳಿದೆ.

ಗುಜರಾತ್ ಮಾದರಿ ಅಲುಗಾಡಿದೆ, 2019 ರಲ್ಲಿ ಬಿಜೆಪಿ ಕುಸಿಯದಿರಲಿ: ಶಿವಸೇನೆ
ಉದ್ಧವ್ ಠಾಕ್ರೆ
Published On :
ಮುಂಬೈ: ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ವಿರುದ್ಧ ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಟೀಕೆ ಮಾಡಿದ್ದು ಗುಜರಾತ್ ಮಾದರಿ ಅಲುಗಾಡಿದೆ ಎಂದು ಹೇಳಿದೆ. 
ಸಾಮ್ನಾದಲ್ಲಿನ ಸಂಪಾದಕೀಯದಲ್ಲಿ ಲೇಖನ ಪ್ರಕಟಿಸಿರುವ ಶಿವಸೇನೆ, ಗುಜರಾತ್ ನಲ್ಲಿ ಚುನಾವಣೆ ಗೆಲ್ಲುವುದಕ್ಕಾಗಿ ಬಿಜೆಪಿ ಭಾವನಾತ್ಮಕ ವಿಷಯಗಳು ಹಾಗೂ ಹಿಂದೂ-ಮುಸ್ಲಿಮರ ವಿಭಜನೆಯನ್ನು ಬಳಸಿಕೊಂಡಿದೆ. 22 ವರ್ಷಗಳಲ್ಲಿ ನಡೆದಿರುವ ಅಭಿವೃದ್ಧಿಯ ಬಗ್ಗೆ ಯಾವುದೇ ಬಿಜೆಪಿ ನಾಯಕನೂ ಮಾತನಾಡಲು ಬಯಸುತ್ತಿರಲಿಲ್ಲ ಎಂದು ಶಿವಸೇನೆ ಹೇಳಿದೆ. 
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿಂದಿನ ಚುನಾವಣೆಗಿಂತ ಕಡಿಮೆ ಸ್ಥಾನಗಳನ್ನು ಪಡೆದಿರುವುದು ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ. 2019 ರ ಲೋಕಸಭ ಚುನಾವಣೆಯಲ್ಲಿ ಬಿಜೆಪಿ ಕುಸಿಯುವುದಿಲ್ಲ ಎಂಬ ಆಶಯ ಇದೆ ಎಂದು ಶಿವಸೇನೆ ಹೇಳಿದೆ. 
ಬಿಜೆಪಿಯ ಗೆಲುವಿನ ಹೊರತಾಗಿಯೂ ಎಲ್ಲರೂ ಗುಜರಾತ್ ನಲ್ಲಿ ರಾಹುಲ್ ಗಾಂಧಿ ಅವರ ಕಾಂಗ್ರೆಸ್ ಪಕ್ಷ ಪುಟಿದೆದ್ದಿರುವುದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದಿರುವ ಸಾಮ್ನ ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ನ್ನು ನಿಜವಾದ ಜಯಶಾಲಿ ಎಂದು ಹೇಳಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.