ದೇಶ

ರಾಹುಲ್ ಗಾಂಧಿ ಮುಳುಗುತ್ತಿರುವ ಹಡಗಿನ ಕ್ಯಾಪ್ಟನ್: ಬಿಜೆಪಿ ನಾಯಕ ಬಬುಲ್ ಸುಪ್ರಿಯೊ

ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಶನಿವಾರ ಅಧಿಕಾರ ಸ್ವೀಕರಿಸಿದ ರಾಹುಲ್ ಗಾಂಧಿ ಅವರು ಮುಳುಗುತ್ತಿರುವ ಹಡಗಿನ ಕ್ಯಾಪ್ಟನ್ ಎಂದು....

ರಾಹುಲ್ ಗಾಂಧಿ ಮುಳುಗುತ್ತಿರುವ ಹಡಗಿನ ಕ್ಯಾಪ್ಟನ್: ಬಿಜೆಪಿ ನಾಯಕ ಬಬುಲ್ ಸುಪ್ರಿಯೊ
ರಾಹುಲ್ ಗಾಂಧಿ- ಸೋನಿಯಾ ಗಾಂಧಿ
Published On :
ನವದೆಹಲಿ: ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಶನಿವಾರ ಅಧಿಕಾರ ಸ್ವೀಕರಿಸಿದ ರಾಹುಲ್ ಗಾಂಧಿ ಅವರು ಮುಳುಗುತ್ತಿರುವ ಹಡಗಿನ ಕ್ಯಾಪ್ಟನ್ ಎಂದು ಕೇಂದ್ರ ಸಚಿವ, ಬಿಜೆಪಿ ನಾಯಕ ಬಬುಲ್ ಸುಪ್ರಿಯೊ ಅವರು ಶನಿವಾರ ಹೇಳಿದ್ದಾರೆ.
ರಾಹುಲ್ ಗಾಂಧಿ ಪದಗ್ರಹಣದ ಕುರಿತು ಎಎನ್ಐಗೆ ಪ್ರತಿಕ್ರಿಯಿಸಿದ ಕೇಂದ್ರ ಭಾರೀ ಕೈಗಾರಿಕೆ ಖಾತೆ ರಾಜ್ಯ ಸಚಿವ, ರಾಹುಲ್ ಗಾಂಧಿ ಮುಳುಗುತ್ತಿರುವ ಹಡಗಿನ ಕ್ಯಾಪ್ಟನ್ ಆಗಿದ್ದಾರೆ. ಅವರು ಏನಾದರೂ ಹಾಸ್ಯಮಯವಾಗಿ ಹೇಳಿರುತ್ತಾರೆ. ಮನಗೆ ಹೋದ ಮೇಲೆ ನಾನು ಅವರ ಭಾಷಣ ನೋಡಿ ಆನಂದಪಡುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಅವರ ಭಾಷಣ ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎಂಬ ಮಾತು ಕೇಳಿದ್ದೇನೆ. ಆದರೆ ಅವರು ತಮ್ಮ ಬಗ್ಗೆಯೇ ಮಾತನಾಡಿಬೇಕು ಅಂತ ನಾನು ಭಾವಿಸಿದ್ದೇನೆ ಎಂದು ಸುಪ್ರಿಯೊ ಅವರು ಹೇಳಿದ್ದಾರೆ.
ಕಾಂಗ್ರೆಸ್ ಭ್ರಷ್ಟಾಚಾರ ಚಿಂತನೆ ಒಳಗೊಂಡಿರುವ ಪಕ್ಷ. ರಾಹುಲ್ ಗಾಂಧಿ ಅಧ್ಯಕ್ಷರಾದರೂ ಅದು ಬದಲಾಗವುದಿಲ್ಲ ಎಂದು ಮತ್ತೊಬ್ಬ ಬಿಜೆಪಿ ನಾಯಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಇಂದು ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಕಾಂಗ್ರೆಸ್ ನಾಯಕತ್ವ ಬದಲಾದರೂ ಭ್ರಷ್ಟಾಚಾರ ಬದಲಾಗುವುದಿಲ್ಲ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.