ದೇಶ

ಲೆದರ್, ಪಾದರಕ್ಷೆ ಉದ್ಯಮಕ್ಕೆ 2,600 ಕೋಟಿ ರೂ ಪ್ಯಾಕೇಜ್ ಗೆ ಸರ್ಕಾರದ ಒಪ್ಪಿಗೆ

ಲೆದರ್ ಹಾಗೂ ಪಾದರಕ್ಷೆ ಉದ್ಯಮದಲ್ಲಿ ಉದ್ಯೋಗ ಸೃಷ್ಟಿಗೆ ನೆರವಾಗುವಂತೆ 2,600 ಕೋಟಿ ರೂ ಪ್ಯಾಕೇಜ್ ನೀಡುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಲೆದರ್, ಪಾದರಕ್ಷೆ ಉದ್ಯಮಕ್ಕೆ 2,600 ಕೋಟಿ ರೂ ಪ್ಯಾಕೇಜ್ ಗೆ ಸರ್ಕಾರದ ಒಪ್ಪಿಗೆ
ಲೆದರ್, ಪಾದರಕ್ಷೆ ಉದ್ಯಮಕ್ಕೆ 2,600 ಕೋಟಿ ರೂ ಪ್ಯಾಕೇಜ್ ಗೆ ಸರ್ಕಾರದ ಒಪ್ಪಿಗೆ
Published On :
ನವದೆಹಲಿ: ಲೆದರ್ ಹಾಗೂ ಪಾದರಕ್ಷೆ ಉದ್ಯಮದಲ್ಲಿ ಉದ್ಯೋಗ ಸೃಷ್ಟಿಗೆ ನೆರವಾಗುವಂತೆ 2,600 ಕೋಟಿ ರೂ ಪ್ಯಾಕೇಜ್ ನೀಡುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಉದ್ಯಮ ಇನ್ನು ಮೂರು ವರ್ಷಗಳಲ್ಲಿ 3.24 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ.  
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರದ ಇಂಡಿಯನ್ ಫುಟ್ ವೇರ್, ಲೆದರ್ ಪರಿಕರಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದೂ ಈ ಪ್ಯಾಕೇಜ್ ನ ಉದ್ದೇಶವಾಗಿದೆ. 
ಈ ಯೋಜನೆಯಿಂದಾಗಿ ಲೆದರ್ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಯಾಗಲಿದ್ದು, ಲೆದರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇರುವ ಪರಿಸರ ಆತಂಕಗಳನ್ನು ಬಗೆಹರಿಯುವ ವಿಶ್ವಾಸವಿದೆ ಎಂದು ಸರ್ಕಾರ ತಿಳಿಸಿದೆ. ಪಾದರಕ್ಷೆ ಹಾಗೂ ಲೆದರ್ ಕ್ಷೇತ್ರದಲ್ಲಿನ ಬೃಹತ್ ಹೂಡಿಕೆಗೆ ತೆರಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.