ತೆಲಂಗಾಣ ಅರಣ್ಯ ಪ್ರದೇಶದಲ್ಲಿ ಎನ್ ಕೌಂಟರ್: 8 ನಕ್ಸಲರ ಹತ್ಯೆ
ತೆಲಂಗಾಣದ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಗುರುವಾರ ನಡೆಸಿದ ಎನ್ ಕೌಂಟರ್ ನಲ್ಲಿ ಒಟ್ಟು 8 ಮಂದಿ ನಕ್ಸಲರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.

Published On :
ಹೈದರಾಬಾದ್: ತೆಲಂಗಾಣದ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಗುರುವಾರ ನಡೆಸಿದ ಎನ್ ಕೌಂಟರ್ ನಲ್ಲಿ ಒಟ್ಟು 8 ಮಂದಿ ನಕ್ಸಲರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಭದ್ರಾದ್ರಿ ಜಿಲ್ಲೆಯ ತೆಕುಲಪಲ್ಲಿಯ ಕೊತ್ತಗೂಡೆಂನಲ್ಲಿ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿದ್ದ ಹೊಸ ಚಂದ್ರ ಪುಲ್ಲಾ ರೆಡ್ಡಿ ಸಿಪಿ-ಬಾಟ ಸಂಘಟನೆಗೆ ಸೇರಿದ್ದ 8 ಮಂದಿ ನಕ್ಸಲರನ್ನು ಹೊಡೆದುರುಳಿಸಲಾಗಿದೆ. ವಿವಿಧ ಕಾರ್ಯಾಚರಣೆಗಳಿಗಾಗಿ ಚದುರಿದ್ದ ಉಗ್ರರು ಇಂದು ತೆಕುಲಪಲ್ಲಿಯ ಕೊತ್ತಗೂಡೆಂ ಅರಣ್ಯ ಪ್ರದೇಶದಲ್ಲಿ ಮರು ಒಗ್ಗೂಡುವ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳುಬುಧವಾರ ರಾತ್ರಿ ಸ್ಥಳಕ್ಕೆ ದೌಡಾಯಿಸಿ ನಕ್ಸಲರ ಮೇಲೆ ದಾಳಿ ನಡೆಸಿದೆ. ಗುರುವಾರ ಬೆಳಿಗ್ಗೆ 6.30ರವರೆಗೂ ಕಾರ್ಯಾಚರಣೆ ನಡೆದಿದ್ದು, ಈ ವೇಳೆ 8 ಮಂದಿ ನಕ್ಸಲರು ಸ್ಥಳದಲ್ಲೇ ಅಸು ನೀಗಿ ಹಲವರು ಪರಾರಿಯಾಗಿದ್ದಾರೆ.
ಈ ಪ್ರದೇಶದಲ್ಲಿ ಕನಿಷ್ಠ 17 ನಕ್ಸಲರ ಚಲನವಲನ ಇರುವುದರ ಕುರಿತು ಪೊಲೀಸರಿಗೆ ಮಾಹಿತಿ ಇತ್ತು. ಅವರನ್ನು ಸೆರೆಹಿಡಿಯಲೆಂದು ಆರಂಭಗೊಂಡ ಕಾರ್ಯಾಚರಣೆ ಎನ್ಕೌಂಟರ್ ಆಗಿ ಮಾರ್ಪಟ್ಟಿತು. ಎಂಟು ಜನರನ್ನು ಹತ್ಯೆಗೈದ ಬಳಿಕ, ಉಳಿದವರು ಪರಾರಿಯಾದರು. ಈ ಕಾರ್ಯಾಚರಣೆಯಲ್ಲಿ ನಕ್ಸಲ್ ನಿಗ್ರಹ ತಂಡ(ಗ್ರೇಹೌಂಡ್ಸ್) ಭಾಗವಹಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಂದ್ರಪುಲ್ಲ ರೆಡ್ಡಿ ಪೊರು ಬಾಟ ಗುಂಪಿಗೆ ಸೇರಿದ ಈ ಮಾವೋವಾದಿಗಳ ಮೇಲೆ ಕೊಲೆ, ಸುಲಿಗೆ ಮತ್ತು ಬೆದರಿಕೆ ಪ್ರಕರಣಗಳು ದಾಖಲಾಗಿದ್ದವು. ಮೃತರಲ್ಲಿ ಈಶಂ ನರೇಶ್, ಎಂ.ಸಮೈಹ, ಸಂಜೀವ್, ನರಸಿಂಹ ಮತ್ತು ಅಮರ್ ಎಂಬ ಐವರನ್ನು ಗುರುತಿಸಲಾಗಿದೆ. ಈ ಮೊದಲು ಇವರು ಆಂಧ್ರ–ಒಡಿಸ್ಸಾ ಗಡಿಯಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಇವರ ಚಟುವಟಿಕೆಗಳು ಖಮ್ಮಂ–ವರಂಗಲ್ ಜಿಲ್ಲೆಗಳಿಗೂ ವಿಸ್ತರಿಸಿದ್ದವು ಎಂದು ಭದ್ರಾದ್ರಿ ಎಸ್ ಪಿ ಅಂಬರ್ ಕಿಶೋರ್ ಜಾ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


