ಅಮರನಾಥ ದೇವಾಲಯದಲ್ಲಿ ಮಂತ್ರ ಹೇಳುವಂತಿಲ್ಲ, ಘಂಟಾನಾದ ಮಾಡುವಂತಿಲ್ಲ, ಹಸಿರು ಪೀಠ ಆದೇಶ
ಅಮರನಾಥ ಗುಹೆಯಲ್ಲಿ ಮಂತ್ರಗಳ ಪಠಣಕ್ಕೆ ರಾಷ್ಟ್ರೀಯ ಹಸಿಉರು ಪೀಠವು ನಿಷೇಧ ಹೇರಿದೆ.

Published On :
ನವದೆಹಲಿ: ಅಮರನಾಥ ಗುಹೆಯಲ್ಲಿ ಮಂತ್ರಗಳ ಪಠಣಕ್ಕೆ ರಾಷ್ಟ್ರೀಯ ಹಸಿಉರು ಪೀಠವು ನಿಷೇಧ ಹೇರಿದೆ. ಅಮರನಾಥ ಗುಹಾ ದೇವಾಲಯ ಆಡಳಿತ ಮಂಡಳಿಗೆ ಈ ಕುರಿತಂತೆ ಪೀಠವು ಆದೇಶ ನೀಡಿದೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಯಾತ್ರಾರ್ಥಿಗಳಿಗೆ ಸಾಕಷ್ಟು ಮೂಲಭೂತ ಸೌಕರ್ಯ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಹಸಿರು ಪೀಠವು ಕಳೆದ ತಿಂಗಳು ಅಮರನಾಥ ದೇವಾಲಯ ಮಂಡಳಿಯಿಂದ ಆಡಳಿತವನ್ನು ತಾನು ವಹಿಸಿಕೊಂಡಿತ್ತು. ಹೀಗೆ ಆಡಳಿತ ತನ್ನ ವಶಕ್ಕೆ ಬಂದ ಬಳಿಕ ಪೀಠ ಈ ಆದೇಶ ಹೊರಡಿಸಿದೆ.
ಬುಧವಾರ, ಮುಖ್ಯ ನ್ಯಾಯಮೂರ್ತಿ ಸ್ವಾತಂತರ್ ಕುಮಾರ್ ನೇತೃತ್ವದ ಎನ್ ಜಿಟಿ ಪೀಠವು ಗುಹಾ ದೇವಾಲಯದಲ್ಲಿ ಘಂಟಾನಾದ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸಮುದ್ರ ಮಟ್ಟದಿಂದ 3,888 ಮೀಟರುಗಳಷ್ಟು ಎತ್ತರದಲ್ಲಿರುವ ಈ ದೇವಾಲಯ ಪ್ರವೇಶಿಸಲು ಭಕ್ತರು ತಮ್ಮ ಮೊಬೈಲ್ ಮತ್ತು ಇತರೆ ಲಗೇಜ್ ಗಳನ್ನು ಕೊನೆಯ ಚೆಕ್ ಪೋಸ್ಟ್ ನಲ್ಲಿ ಇರಿಸಬೇಕಾಗಿತ್ತು
ದೇವಾಲಯದ ಆವರಣದಲ್ಲಿ ಯಾವ ಮಂತ್ರೋದ್ಘಾರವಾಗಲಿ, ಜೈಕಾರಗಳಾಗಲೀ ಕೇಳಿ ಬರಬಾರದೆಂದು ಹಸಿರು ಪೀಠವು ಹೇಳಿದ್ದು ದೇವಾಲಯದ ಆಡಳಿತ ವಹಿಸಿಕೊಂಡವರು ಈ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದಿದೆ. ಅಲ್ಲದೆ ಕಡೆಯ ಚೆಕ್ ಪೋಸ್ಟ್ ನಿಂದ ನಂತರ ಜನರು ಒಂದೇ ಸಾಲಿನಲ್ಲಿ ಚಲಿಸಿ ದೇವಾಲಯವನ್ನು ಪ್ರವೇಶಿಸಬೇಕೆಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
National Green Tribunalರಾಷ್ಟ್ರೀಯ ಹಸಿರು ಪೀಠAmarnath templechanting of mantrasringing of bellsಅಮರನಾಥ ದೇವಾಲಯಮಂತ್ರಗಳ ಪಠಣಘಂಟಾನಾದ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


