ಭಾರತದ ಡಿಎನ್ ಎ ಬೆರಳಚ್ಚು ಮುದ್ರಕ ಪಿತಾಮಹ ಲಾಲ್ ಜೀ ಸಿಂಗ್ ನಿಧನ
ಖ್ಯಾತ ವಿಜ್ಞಾನಿ ಹಾಗೂ ಭಾರತದ ಡಿಎನ್ ಎ ಬೆರಳಚ್ಚು ಮುದ್ರಕ ಪಿತಾಮಹ ಲಾಲ್ ಜೀ ಸಿಂಗ್ ಮರಣ ಹೊಂದಿದ್ದಾರೆ

Published On :
ಲಖ್ನೋ: ಖ್ಯಾತ ವಿಜ್ಞಾನಿ ಹಾಗೂ ಭಾರತದ ಡಿಎನ್ ಎ ಬೆರಳಚ್ಚು ಮುದ್ರಕ ಪಿತಾಮಹ ಲಾಲ್ ಜೀ ಸಿಂಗ್ ಮರಣ ಹೊಂದಿದ್ದಾರೆ. ವಾರಣಾಸಿ ವಿಮಾನ ನಿಲ್ದಾಣದಲ್ಲಿದ್ದ ಸಮಯ ತೀವ್ರ ಹ್ದಯಾಘಾತದಿಂದ ಅವರು ಸಾವನ್ನಪ್ಪಿದರು . ಅವರಿಗೆ 70 ವರ್ಷ ವಯಸ್ಸಾಗಿತ್ತು.
ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿಗಳಾಗಿದ್ದ ಇವರು ದೆಹಲಿಗೆ ತೆರಳುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ಅವರನ್ನು ಬಿ ಎಚ್ ಯು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮರಣ ಹೊಂದಿದ್ದಾರೆ..
ಸಿಂಗ್ ಅವರು ಹೈದರಾಬಾದ್ ನ ಸೆಲ್ಯುಲರ್ ಮತ್ತು ಮಾಲಿಕ್ಯೂಲರ್ ಬಯಾಲಜಿ ಕೇಂದ್ರ (ಸಿಸಿಎಂಬಿ) ದ ಸಂಸ್ಥಾಪಕರು, ಹಾಗೂ ಇವರು ಅಂಡಮಾನ್ ನಿಕೋಬಾರ್ ನ ಬುಡಕಟ್ಟು ಜನರಿಗೆ ನೀಡಿದ್ದ ಸಹಾಯಕ್ಕಾಗಿ ಅಂತರಾಷ್ಟ್ರೀಯ ಮೆಚ್ಚುಗೆಗೆ ಪಾತ್ರರಾಗಿದ್ದರು.ಇವರು 1998 ಹಾಗೂ 2009.ರ ನಡುವೆ ಸಿಸಿಎಂಬಿ ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಬಿಎಚ್ ಯು ನ ಉಪ ಕುಲಪತಿಗಳಾಗಿ ಸಿಂಗ್ 2011 ರಲ್ಲಿ ನೇಮಕಗೊಂಡು 2014.ರವರೆಗೆ ಆ ಸ್ಥಾನದಲ್ಲಿ ಕೆಲಸ ಮಾಡಿದ್ದರು.
ಲಾಲ್ ಜೀ ಸಿಂಗ್ ಅವರ ನಿಧನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ವಿಜ್ಞಾನಿscientistDNA finger printingLalji SinghBanaras Hindu University (BHU)Centre for Cellular and Molecular Biology (CCMB)ಡಿಎನ್ಎ ಬೆರಳಚ್ಚು ಮುದ್ರಣಲಾಲ್ ಜೀ ಸಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


