ಗುಜರಾತಿನ ಈ ಹಳ್ಳಿಯಲ್ಲಿ ಶೂನ್ಯ ಮತದಾನ!
ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನಿನ್ನೆಯಷ್ಟೇ ಮುಗಿದಿದೆ.
Published On :
ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನಿನ್ನೆಯಷ್ಟೇ ಮುಗಿದಿದೆ. ಇದರಲ್ಲಿ ಒಟ್ಟಾರೆ ಶೇ. 68 ಮತದಾನವಾಗಿತ್ತು. ಆದರೆ ಇದೇ ವೇಳೆ ಗುಜರಾತಿನ ಒಂದು ಹಳ್ಳಿಯಲ್ಲಿ ಮಾತ್ರ ಶೂನ್ಯ ಮತದಾನವಾಗಿದೆ.
ಗುಜರಾತಿನ ಮೋರ್ಬಿ ಜಿಲ್ಲೆಯ ಗಜಡಿ ಗ್ರಾಮಸ್ಥರು ಈ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಗ್ರಾಮದಲ್ಲಿನ ನೀರಿನ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಪರಿಹರಿಸದ ಕಾರಣ ಗ್ರಾಮದ ಜನತೆ ಈ ಚುನಾವಣೆ ಬಹಿಷ್ಕಾರದ ನಿರ್ಧಾರಕ್ಕೆ ಬಂದಿದ್ದರು.
ಗ್ರಾಮದಲ್ಲಿ ಮತದಾರರ ಪಟ್ಟಿಯಲ್ಲಿ ನೊಂದಣಿಯಾಗಿದ್ದ ಒಟ್ಟು 1,000 ಮಂದಿಯಲ್ಲಿ ಯಾರೂ ಸಹ ಮತದಾನ ಮಾಡಲಿಲ್ಲ. ಹೀಗಾಗಿ ಗ್ರಾಮದ ಮತಗಟ್ಟೆ ಬೆಳಗಿನಿಂದ ಸಂಜೆಯವರೆಗೂ ಖಾಲಿ ಹೊಡೆಯುತ್ತಿತ್ತು. ಮತದಾನ ಪ್ರಕ್ರಿಯೆಗಾಗಿ ನೇಮಕವಾಗಿದ್ದ ಚುನಾವಣಾ ಸಿಬ್ಬಂದಿಗಳು ಸಹ ಅಂತಿಮವಾಗಿ ಶೂನ್ಯ ಮತದಾನ ಎಂದು ದಾಖಲಿಸಿಕೊಂಡರು..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Gujaratಗುಜರಾತ್Gujarat Assembly electionಗುಜರಾತ್ ವಿಧಾನಸಭೆ ಚುನಾವಣೆZero votingMorbi districtboycotted pollingಶೂನ್ಯ ಮತದಾನಮೋರ್ಬಿ ಜಿಲ್ಲೆಚುನಾವಣೆ ಬಹಿಷ್ಕಾರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

