ರಾಣಿ ಗಾಯತ್ರಿ ದೇವಿ ಮೊಮ್ಮಕ್ಕಳು ಆಸ್ತಿಯ ನೈಜ ಹಕ್ಕುದಾರರು, ದೆಹಲಿ ಹೈ ಕೋರ್ಟ್ ತೀರ್ಪು
ರಾಜಮಾತೆ ಗಾಯತ್ರಿ ದೇವಿಯ ಇಬ್ಬರು ಮೊಮ್ಮಕ್ಕಳು ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಾಗಿರುವುದಾಗಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ

Published On :
ನವದೆಹಲಿ: ರಾಜಮಾತೆ ಗಾಯತ್ರಿ ದೇವಿಯ ಇಬ್ಬರು ಮೊಮ್ಮಕ್ಕಳು ಅವರ ಆಸ್ತಿಗಳಿಗೆ ಕಾನೂನುಬದ್ಧ ಉತ್ತರಾಧಿಕಾರಿಗಳಾಗಿರುವುದಾಗಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ ಇದರೊಡನೆ ಗಾಯತ್ರಿದೇವಿಯ ಮಲಮಗನಿಗೆ ಅವರ ಆಸ್ತಿಯಲ್ಲಿ ಪಾಲು ಇದೆ ಎನ್ನುವ ಈ ಹಿಂದಿನ ತೀರ್ಪಿನ್ನು ತಳ್ಳಿ ಹಾಕಿದೆ..ಗಾಯತ್ರಿ ದೇವಿ ಮರಣದ ತರುವಾಯ ಅವರ ಆಸ್ತಿ ಯಾರ ಪಾಲಾಗಲಿದೆ ಎನ್ನುವದರ ಕುರಿತು ವಿವಾದ ಉದ್ಭವಿಸಿತ್ತು.
ಲಾಲಿತ್ಯಾ ಅವರು ತನ್ನ ತಂದೆ ಜಗತ್ ಸಿಂಗ್ ಹಾಗೂ ಜಗತ್ ಸಿಂಗ್, ಸವಾಯಿ ಮಾನ್ ಸಿಂಗ್ ಅವರ ಪುತ್ರ ಎಂದು ಹೈ ಕೋರ್ಟ್ ನಲ್ಲಿ ವಾದಿಸಿದ್ದರು. ಥಾಯ್ ಲ್ಯಾಂಡಿನ ರಾಜಕುವರಿ ಮಾಮ್ ರಾಜವಾಂಗ್ಸೆ ಪ್ರಿಯನಂದನ ಅವರನ್ನು ವಿವಾಹವಾಗಿದ್ದ ಜಗತ್ ಸಿಂಗ್ ತನ್ನೆಲ್ಲಾ ಆಸ್ತಿಗೆ ರಾಣಿ ಗಾಯತ್ರಿ ದೇವಿ ಹಕ್ಕುದಾರಳೆಂದು ಮರಣ ಶಾಸನ ಬರೆದಿಟ್ಟಿದ್ದರು.
ಜುಲೈ 29, 2009 ರಂದು ಗಾಯತ್ರಿ ದೇವಿ,ನಿಧನದ ನಂತರ, ಪ್ರಸ್ತುತ ಬ್ಯಾಂಕಾಕ್ ನಲ್ಲಿ ವಾಸ್ತವ್ಯವಿರುವ ತನ್ನ ಮೊಮ್ಮಕ್ಕಳು ದೇವರಾಜ ಹಾಗೂ ಲಾಲಿತ್ಯ ಅವರುಗಳು ತಾವು ಸಂಪೂರ್ಣ ಆಸ್ತಿಗೆ ಹಕ್ಕುದಾರರೆರೆಂದು ಹೈ ಕೋರ್ಟ್ ಗೆ ಮಾಹಿತಿ ನೀಡಿದ್ದರು. ಇದೇ ವೇಳೆ ಲಾಲಿತ್ಯ ಹಾಗೂ ದೇವರಾಜ್ ಜತೆ ಜತೆಗೇ ಸವಾಯಿ ಮಾನ್ ಸಿಂಗ್ ಅವರ ಇನ್ನೋರ್ವ ಪತ್ನಿಯಲ್ಲಿ ಜನಿಸಿದ ಜಯ್ ಸಿಂಗ್ ಹಾಗು ಪ್ರಥ್ವಿರಾಜ್ ಸಿಂಗ್ ಅವರುಗಳು ಸಹ ಗಾಯತ್ರಿ ದೇವಿಯ ಆಸ್ತಿ ತಮಗೆ ಸೇರಬೇಕೆಂದು ಕೋರ್ಟ್ ಕಟ್ಕಟೆ ಏರಿದ್ದರು. ಆ ಸಂಬಂಧ ಕೋರ್ಟ್ 2010 ಕ್ಕೆ ಅವರ ಪರವಾಗಿ ತೀರ್ಪು ನೀಡೀತ್ತು. ಆದರೆ ಮತ್ತೆ ಮೇಲ್ಮನವಿ ಸಲ್ಲಿಸಿದ ಲಾಲಿತ್ಯ ಹಾಗೂ ದೇವರಾಜ್ ಪರವಾಗಿ ಇದೀಗ ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ತೀರ್ಪು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Delhi High Courtದೆಹಲಿ ಹೈಕೋರ್ಟ್Rajmata Gayatri DeviGayatri Devi\'s grandchildrenJagat SinghLalityaರಾಜಮಾತೆ ಗಾಯತ್ರಿ ದೇವಿಗಾಯತ್ರಿ ದೇವಿ ಮೊಮ್ಮಕ್ಕಳುಜಗತ್ ಸಿಂಗ್ಲಾಲಿತ್ಯಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


