ದೇಶ

ಭಾರತವು ಟ್ರಕೋಮಾ ಸೋಂಕು ಮುಕ್ತ ರಾಷ್ಟ್ರ: ಕೇಂದ್ರ ಸಚಿವ ಜೆ.ಪಿ. ನಾಡ್ಡಾ ಘೊಷಣೆ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಾಡ್ಡಾ ಅವರು ಮಕ್ಕಳಲ್ಲಿ ಸಾಂಕ್ರಾಮಿಕ ಕುರುಡುತನಕ್ಕೆ ಪ್ರಮುಖ ಕಾರಣವಾಗುವ ಸೋಂಕು ಟ್ರಕೋಮಾ ದಿಂದ ಭಾರತ....

ಭಾರತವು ಟ್ರಕೋಮಾ ಸೋಂಕು ಮುಕ್ತ ರಾಷ್ಟ್ರ: ಕೇಂದ್ರ ಸಚಿವ ಜೆ.ಪಿ. ನಾಡ್ಡಾ ಘೊಷಣೆ
ಜೆ.ಪಿ. ನಾಡ್ಡಾ
Published On :
ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಾಡ್ಡಾ ಅವರು ಮಕ್ಕಳಲ್ಲಿ ಸಾಂಕ್ರಾಮಿಕ ಕುರುಡುತನಕ್ಕೆ ಪ್ರಮುಖ ಕಾರಣವಾಗುವ ಸೋಂಕು ಟ್ರಕೋಮಾ  ದಿಂದ ಭಾರತ ಮುಕ್ತವಾಗಿದೆ ಎಂದು ಘೋಷಿಸಿದ್ದಾರೆ.  ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ನ ನೇತ್ರವಿಜ್ಞಾನ ವಿಭಾಗದಲ್ಲಿ ನೆರೆದಿದ್ದ  ಹಿರಿಯ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಸಚಿವರು ಈ  ಘೋಷಣೆ ಮಾಡಿದ್ದಾರೆ.
"ಸಮೀಕ್ಷೆ ನಡೆಸಿದ್ದ ಎಲ್ಲಾ ಜಿಲ್ಲೆಗಳಲ್ಲಿ ಒತ್ಟಾರೆ ಕೇವಲ ಶೇ. 0.7ರಷ್ಟು ಮಕ್ಕಳಲ್ಲಿ ಮಾತ್ರವೇ ಈ ಟ್ರಕೋಮಾ ಸೋಂಕು ಕಂಡು ಬಂದಿದೆ. ಇದು ಡಬ್ಲ್ಯೂಎಚ್ ಓ ನಿಂದ ವ್ಯಾಖ್ಯಾನಿಸಲ್ಪಟ್ಟಿರುವ ಟ್ರಾಕೊಮಾದ ಸೋಂಕಿನ  ಮಾನದಂಡಕ್ಕಿಂತ ಕಡಿಮೆಯಾಗಿದೆ. ಸಮೀಕ್ಷೆಯ  ಪ್ರಕಾರ, ಮಕ್ಕಳಲ್ಲಿ ಸಕ್ರಿಯ ಟ್ರಾಕೊಮಾ ಸೋಂಕು ಕಾಣಿಸಿಕೊಂಡಿಲ್ಲ." ಎಂದು ಸಚಿವ ನಾಡ್ಡಾ  ಹೇಳಿದ್ದಾರೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಕ್ರಿಯ ಸೋಂಕಿನ ಪ್ರಮಾಣವು ಶೇಕಡಾ 5 ಕ್ಕಿಂತ ಕಡಿಮೆಯಿದ್ದರೆ ಅಂತಹಾ ದೇಶವನ್ನು ಟ್ರಕೋಮಾ ಸೋಂಕು ಮುಕ್ತ ಪ್ರದೇಶವೆಂದು ಘೊಷಿಸಲಾಗುತ್ತದೆ
ವೈದ್ಯಕೀಯ ವಿಜ್ಞಾನಗಳ ಪ್ರಕಾರ, ಟ್ರಕೋಮಾ ಕಣ್ಣಿನ ದೀರ್ಘಕಾಲದ ಸೋಂಕಿನ ಕಾಯಿಲೆಯಾಗಿದ್ದು, ಮಕ್ಕಳಲ್ಲಿ ಕುರುಡುತನ ಕಾಣಿಸಿಕೊಳ್ಳುವ ಪ್ರಮುಖ ಕಾರಣವಾಗಿದೆ. ಕಲುಷಿತ  ಪರಿಸರ ಮತ್ತು ನೈರ್ಮಲ್ಯ ಕೊರತೆ ಯಿಂದಾಗಿ ಈ ಸೋಂಕು ಕಾಣಿಸಿಕೊಳ್ಳುತ್ತದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.