ದೇಶ

ಚೀನಾ ಸೇನೆ ಮೇಲೆ ಕಣ್ಣಿಡಲಿದೆ ದೇಶದ ಮೊದಲ ಸ್ವದೇಶಿ ನಿರ್ಮಿತ ಡ್ರೋಣ್!

ಡೊಕ್ಲಾಂ ಸೇರಿದಂತೆ ಗಡಿಯಲ್ಲಿ ಪದೇ ಪದೇ ಕಾಲು ಕೆರೆಯುತ್ತಿರುವ ಚೀನಾದ ಡ್ರ್ಯಾಗನ್ ಸೇನೆ ಮೇಲೆ ಕಣ್ಣಿಡಬಲ್ಲ ಅತ್ಯಾಧುನಿಕ ವಿಚಕ್ಷಣಾ ಚಾಲಕ ರಹಿತ ಡ್ರೋಣ್ ವಿಮಾನವನ್ನು ಅಭಿವೃದ್ಧಿ ಪಡಿಸಲಾಗಿದೆ.

ಚೀನಾ ಸೇನೆ ಮೇಲೆ ಕಣ್ಣಿಡಲಿದೆ ದೇಶದ ಮೊದಲ ಸ್ವದೇಶಿ ನಿರ್ಮಿತ ಡ್ರೋಣ್!
ವಿಶೇಷ ಡ್ರೋಣ್ (ಚಿತ್ರಕೃಪೆ: ಬೋಯಿಂಗ್)
Published On :
ನವದೆಹಲಿ: ಡೊಕ್ಲಾಂ ಸೇರಿದಂತೆ ಗಡಿಯಲ್ಲಿ ಪದೇ ಪದೇ ಕಾಲು ಕೆರೆಯುತ್ತಿರುವ ಚೀನಾದ ಡ್ರ್ಯಾಗನ್ ಸೇನೆ ಮೇಲೆ ಕಣ್ಣಿಡಬಲ್ಲ ಅತ್ಯಾಧುನಿಕ ವಿಚಕ್ಷಣಾ ಚಾಲಕ ರಹಿತ ಡ್ರೋಣ್ ವಿಮಾನವನ್ನು ಅಭಿವೃದ್ಧಿ ಪಡಿಸಲಾಗಿದೆ.
ಆಂಗ್ಲ ಮಾಧ್ಯಮವೊಂದು ವರದಿ ಮಾಡಿರುವಂತೆ ಪ್ರಸ್ತುತ ಚೀನಾ ಸೇನೆ ಮೇಲೆ ನಿಗಾ ಇಟ್ಟಿರುವ ಸ್ಯಾಟಲೈಟ್ ಗಳಿಗೆ ಪರ್ಯಾಯವಾಗಿ ಈ ಡ್ರೋಣ್ ಕಾರ್ಯ ನಿರ್ವಹಿಸಲಿದ್ದು, ಬರೊಬ್ಬರಿ 65 ಸಾವಿರ ಅಡಿಗಳ ಮೇಲೆ ಹಾರಾಡಬಲ್ಲ  ಸಾಮರ್ಥ್ಯವನ್ನು ಈ ಡ್ರೋಣ್ ಹೊಂದಿದೆ ಎನ್ನಲಾಗಿದೆ. ನೊಯ್ಡಾ ಮೂಲದ ನ್ಯೂ ಸ್ಪೇಸ್ ರೀಸರ್ಚ್ ಅಂಡ್ ಟೆಕ್ನಾಲಜಿ ಎಂಬ ಸ್ಟಾರ್ಟ್ ಅಪ್ ಸಂಸ್ಥೆ ಈ ಅತ್ಯಾಧುನಿಕ ಡ್ರೋಣ್ ಸಂಸ್ಥೆಯನ್ನು ನಿರ್ಮಾಣ ಮಾಡಿದ್ದು, ಮುಂದಿನ  ದಿನಗಳಲ್ಲಿ ಈ ಡ್ರೋಣ್ ನ ಇಂಧನ ಸಾಮರ್ಥ್ಯವನ್ನು ಹೆಚ್ಚಿಸಿ ಹೆಚ್ಚು ಹೊತ್ತು ಹಾರಬಲ್ಲ ಸಾಮರ್ಥ್ಯವನ್ನು ಇದಕ್ಕೆ ನೀಡಲು ಸಂಶೋಧಕರು ನಿರ್ಧರಿಸಿದ್ದಾರೆ.
ಇನ್ನೂ ಯಾವುದೇ ಹೆಸರಿಡದ ಈ ಡ್ರೋಣ್ ಶೀಘ್ರದಲ್ಲೇ ಇಂಡೋ-ಚೀನಾ ಗಡಿಯಲ್ಲಿ ಕಾರ್ಯಾಚರಣೆ ಆರಂಭಿಸಲಿದ್ದು, ಚೀನಾ ಸೇನೆಯ ಪ್ರತಿಯೊಂದು ಚಲನವಲನಗಳನ್ನು ಗಮನಿಸಲಿದೆ. ಅಷ್ಟೇ ಅಲ್ಲದೇ ತನ್ನ ಅತ್ಯಾಧುನಿಕ  ಕ್ಯಾಮೆರಾಗಳ ನೆರವಿನಿಂದ ಹೈ ರೆಸಲ್ಯೂಷನ್ ಚಿತ್ರಗಳನ್ನು ಸೆರೆ ಹಿಡಿದು ಕೂಡಲೇ ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ ಈ ವಿಶೇಷ ಡ್ರೋಣ್  ಸುಮಾರು 65 ಸಾವಿರ ಅಡಿಗಳ ಎತ್ತರದಲ್ಲಿ ಹಾರಾಟ ನಡೆಸಿದ್ದು, ಸತತವಾಗಿ ಮೂರು ವಾರಗಳ ಕಾಲ ಕಾರ್ಯಾಚಾರಣೆ ನಡೆಸಿತ್ತಂತೆ. 
ಅಂತೆಯೇ ಚೀನಾ ಸೇನೆಯ ಪ್ರಾಬಲ್ಯವಿರುವ ಟಿಬೆಟ್ ಶಿಗಾಟ್ಸೆ ನಗರದ ಮೇಲೂ ಈ ಡ್ರೋಣ್ 24 ಗಂಟೆಗಳ ಹಾರಾಟ ನಡೆಸಿತ್ತು ಎಂದು ಹೇಳಲಾಗಿದೆ. ಆ ಮೂಲಕ ಈ ಡ್ರೋಣ್ ಭಾರತದಲ್ಲಿ ವಿನ್ಯಾಸಗೊಳಿಸಿದ ಮೊದಲ ಖಾಸಗಿ  ಚಾಲಕ ರಹಿತ ಡ್ರೋಣ್ ವಿಮಾನ ಎಂಬ ಖ್ಯಾತಿಗೂ ಭಾಜನವಾಗಿದೆ.
ಭಾರತದ ಡ್ರೋಣ್ ಮೇಲೆ ಬೋಯಿಂಗ್ ಕಣ್ಣು
ಇನ್ನು ವಿಮಾನ ತಯಾರಿಕಾ ಕ್ಷೇತ್ರದಲ್ಲಿ ಭಾರಿ ಖ್ಯಾತಿ ಗಳಿಸಿರುವ ಬೋಯಿಂಗ್ ಸಂಸ್ಥೆಯ ಕಣ್ಣು ಈ ಡ್ರೋಣ್ ನಿರ್ಮಾಣ ಮಾಡಿದ ಸಂಸ್ಥೆಯ ಮೇಲೆ ಬಿದ್ದಿದ್ದು, ತಾಂತ್ರಿಕ ಮತ್ತು ಆರ್ಥಿಕ ನೆರವಿನ ಕುರಿತು ಉಭಯ ಸಂಸ್ಥೆಗಳು  ಚರ್ಚೆಯಲ್ಲಿ ತೊಡಗಿವೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.