ನೋಟು ನಿಷೇಧಗೊಂಡ 53 ದಿನದೊಳಗೆ 2000 ರು. ನಕಲಿ ನೋಟು ಚಲಾವಣೆ: ಎನ್‌ಸಿಆರ್‌ಬಿ
500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧಗೊಂಡ 53 ದಿನದೊಳಗೆ ನೂತನವಾಗಿ ಹೊರಬಂದಿದ್ದ 2000 ಮುಖಬೆಲೆಯ ನಕಲಿ ನೋಟುಗಳು...

Published On :
ನವದೆಹಲಿ: 500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧಗೊಂಡ 53 ದಿನದೊಳಗೆ ನೂತನವಾಗಿ ಹೊರಬಂದಿದ್ದ 2000 ಮುಖಬೆಲೆಯ ನಕಲಿ ನೋಟುಗಳು ಚಲಾವಣೆಯಾಗಿದ್ದವು ಎಂದು ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕ(ಎನ್‌ಸಿಆರ್‌ಬಿ) ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದೆ.
ನಕಲಿ ನೋಟುಗಳ ಹಾವಳಿಯನ್ನು ತಡೆಗಟ್ಟುವ ಸಲುವಾಗಿ 2016ರ ನವೆಂಬರ್ 8ರಂದು ರಾತ್ರಿ 8 ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ತೀರ್ಮಾನವನ್ನು ಘೋಷಿಸಿದ್ದರು. ಇದಾಗಿ ಕೇವಲ 53 ದಿನದೊಳಗೆ ನೂತನ 500 ಹಾಗೂ 2000 ಮುಖಬೆಲೆಯ ನಕಲಿ ನೋಟುಗಳು ಹೊರಬಂದಿದ್ದವು. ಪೊಲೀಸರು ಮೊದಲಿಗೆ 2,272 ನಕಲಿ 2000 ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದರು ಎಂದು ಎನ್‌ಸಿಆರ್‌ಬಿ ಹೇಳಿದೆ.
ಗುಜರಾತ್(1300) ನಲ್ಲಿ ಹೆಚ್ಚು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪಂಜಾಬ್(548), ಕರ್ನಾಟಕ(254), ತೆಲಂಗಾಣ(114), ಮಹಾರಾಷ್ಟ್ರ(27), ಮಧ್ಯಪ್ರದೇಶ(8), ರಾಜಸ್ತಾನ(6) ಮತ್ತು ಆಂಧ್ರಪ್ರದೇಶ ಮತ್ತು ಹರಿಯಾಣದಲ್ಲಿ ತಲಾ 3 ನೋಟು. ಜಮ್ಮು ಮತ್ತು ಕಾಶ್ಮೀರ ಮತ್ತು ಕೇರಳದಲ್ಲಿ ತಲಾ 2 ನೋಟು. ಮಣಿಪುರ ಮತ್ತು ಒಡಿಶಾದಲ್ಲಿ ತಲಾ 1 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಎನ್‌ಸಿಆರ್‌ಬಿ ಮಾಹಿತಿ ನೀಡಿದೆ.
ಸದ್ಯ ಭಾರತದಾದ್ಯಂತ ಸುಮಾರು 2,81,839 ನಕಲಿ 2000 ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ನೋಟು ನಿಷೇಧಗೊಂಡ ನಂತರ ನಕಲಿ ನೋಟುಗಳು ಚಲಾವಣೆಯಾಗಲು ಹೆಚ್ಚು ದಿನ ತೆಗೆದುಕೊಳ್ಳಲಿಲ್ಲ ಎಂದು ಎನ್‌ಸಿಆರ್‌ಬಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


