ದೇಶ

ನನ್ನ ವಾದಕ್ಕೆ ಜೆಎನ್ ಯು ಹೆದರುತ್ತದೆ ಆದ್ದರಿಂದ ರಾಮಮಂದಿರದ ಕುರಿತ ಕಾರ್ಯಕ್ರಮ ರದ್ದು: ಸ್ವಾಮಿ

ಜೆಎನ್ ಯು ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ರಾಮ ಮಂದಿರದ ಕುರಿತು ಡಿ.06 ರಂದು ನಡೆಯಬೇಕಿದ್ದ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಅವರ ಉಪನ್ಯಾಸ ಕಾರ್ಯಕ್ರಮ ರದ್ದುಗೊಂಡಿದೆ.

ನನ್ನ ವಾದಕ್ಕೆ ಜೆಎನ್ ಯು ಹೆದರುತ್ತದೆ ಆದ್ದರಿಂದ ರಾಮಮಂದಿರದ ಕುರಿತ ಕಾರ್ಯಕ್ರಮ ರದ್ದು: ಸ್ವಾಮಿ
ಸುಬ್ರಹ್ಮಣಿಯನ್ ಸ್ವಾಮಿ
Published On :
ಜೆಎನ್ ಯು ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ರಾಮ ಮಂದಿರದ ಕುರಿತು ಡಿ.06 ರಂದು ನಡೆಯಬೇಕಿದ್ದ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಅವರ ಉಪನ್ಯಾಸ ಕಾರ್ಯಕ್ರಮ ರದ್ದುಗೊಂಡಿದೆ. 
ಏಕಾಏಕಿ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಜೆಎನ್ ಯು ವಿಶ್ವವಿದ್ಯಾನಿಲಯ ತಮ್ಮ ವಾದಕ್ಕೆ ಹೆದರುತ್ತದೆ. ಆದ್ದರಿಂದ ಉಪನ್ಯಾಸವನ್ನು ರದ್ದುಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. 
ಇದೇ ವೇಳೆ ಜೆಎನ್ ಯು ವಿಶ್ವವಿದ್ಯಾನಿಲಯದ ಉಪಕುಲಪತಿ ಎಂ ಜಗಗೀಶ್ ಕುಮಾರ್ ಅವರಿಗೆ ಸ್ವಲ್ಪ ಧೈರ್ಯ ತೋರುವಂತೆ ಸಲಹೆ ನೀಡಿರುವ ಸುಬ್ರಹ್ಮಣಿಯನ್ ಸ್ವಾಮಿ , ಭದ್ರತೆಯ ಬಗ್ಗೆ ಆತಂಕವಿದ್ದರೆ ಉಪಕುಲಪತಿಗಳು ಈ ಮುನ್ನವೇ ತಿಳಿಸಬಹುದಿತು. ನಾವು ಪರ್ಯಾಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೆವು ಎಂದು ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ. 
ಬಾಬ್ರಿ ಮಸೀದಿ ಧ್ವಂಸಗೊಂಡ 25 ನೇ ವಾರ್ಷಿಕ ದಿನದ ಹಿನ್ನೆಲೆಯಲ್ಲಿ ಜೆಎನ್ ಯು ವಿವಿ ವಿದ್ಯಾರ್ಥಿಗಳ ಸಂಘಟನೆ ವೈ ರಾಮ್ ಮಂದಿರ್ ಇನ್ ಅಯೋಧ್ಯಾ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ನಡೆಸಲು ಮುಂದಾಗಿತ್ತು. ಆದರೆ ವಿವಿ ಕೊನೆ ಕ್ಷಣದಲ್ಲಿ ಅನುಮತಿಯನ್ನು ನಿರಾಕರಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.