ಡಿ.5ರಂದು ಜಯಲಲಿತಾ ಪುಣ್ಯತಿಥಿ ಆಚರಣೆಗೆ ತಡೆ ನೀಡಲು ಹೈಕೋರ್ಟ್ ನಕಾರ
ತಮಿಳುನಾಡು ಸರ್ಕಾರ ಡಿಸೆಂಬರ್ 5ರಂದು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಪುಣ್ಯತಿಥಿ ಆಚರಿಸುತ್ತಿರುವುದಕ್ಕೆ ತಡೆ ಕೋರಿ....

Published On :
ಚೆನ್ನೈ: ತಮಿಳುನಾಡು ಸರ್ಕಾರ ಡಿಸೆಂಬರ್ 5ರಂದು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಪುಣ್ಯತಿಥಿ ಆಚರಿಸುತ್ತಿರುವುದಕ್ಕೆ ತಡೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಆರ್ ಹೇಮಲತಾ ಅವರನ್ನೊಳಗೊಂಡ ಪೀಠ, ರಾಜ್ಯ ಸರ್ಕಾರ ಡಿಸೆಂಬರ್ 5ರಂದು ಜಯಲಲಿತಾ ಅವರ ಪುಣ್ಯತಿಥಿಯನ್ನಾಗಿ ಆಚರಿಸುತ್ತಿರುವುದಕ್ಕೆ ತಡೆ ಕೋರಿ ಆರ್ ಕುಮಾರವೇಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಈ ಕೋರ್ಟ್, ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರೇ ಪತ್ರ ಬರೆದಿದ್ದಾರೆಯೇ? ಎಂಬ ಬಗ್ಗೆ ವಿವಾದಗಳನ್ನು ನಿರ್ಧರಿಸಲು ಸಾಧ್ಯವಿಲ್ಲ.ಹೆಬ್ಬೆರಳು ಗುರುತಿನ ಆಧಾರದ ಮೇಲೆ ಅವರ ಮರಣವನ್ನು ನಿರ್ಧರಿಸುವ ಪರಿಣತಿ ಅಥವಾ ಅನುಭವವನ್ನು ಈ ಕೋರ್ಟ್ ಹೊಂದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಅಲ್ಲದೆ ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಜಯಲಲಿತಾ ಅವರು 72 ದಿನಗಳ ಸುದೀರ್ಘ ಚಿಕಿತ್ಸೆ ನಂತರ ಕಳೆದ ವರ್ಷ ಡಿಸೆಂಬರ್ 5ರಂದು ಕೊನೆಯುಸಿರೆಳೆದಿದ್ದರು. ಜಯಲಲಿತಾ ನಿಜಕ್ಕೂ ಅನಾರೋಗ್ಯದಿಂದ ಸತ್ತಿದ್ದಾ? ಅಥವಾ ಅದು ಕೊಲೆಯಾ? ಎಂಬ ಪ್ರಶ್ನೆ ಕಳೆದ ವರ್ಷ ಡಿ.5 ರಂದು ಅಮ್ಮಾ ಅಸುನೀಗಿದಾಗಲೇ ಎದ್ದಿದೆ. ಇಂದಿಗೂ ಅದಕ್ಕೆ ಸೂಕ್ತ ಉತ್ತರ ದೊರಕಿಲ್ಲ. ಈ ಕುರಿತು ತನಿಖೆಗೆ ತಮಿಳುನಾಡು ಸರ್ಕಾರ ಆಯೋಗ ರಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


