ಒಂದೇ ವರ್ಷದಲ್ಲಿ 200 ಉಗ್ರರನ್ನು ಕೊಂದು ದ್ವಿಶತಕ ಬಾರಿಸಿದ ಸೇನೆಗೆ ಸೆಹ್ವಾಗ್ ಸೆಲ್ಯೂಟ್
ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಗಳು ಹೆಚ್ಚು ಮನ್ನಣೆ ಪಡೆಯುತ್ತವೆ. ಅಂತೆ ಭಾರತೀಯ ಸೇನೆ ಕುರಿತಂತೆ ಸೆಹ್ವಾಗ್ ಮಾಡಿರುವ ಟ್ವೀಟ್...

Published On :
ನವದೆಹಲಿ: ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಗಳು ಹೆಚ್ಚು ಮನ್ನಣೆ ಪಡೆಯುತ್ತವೆ. ಅಂತೆ ಭಾರತೀಯ ಸೇನೆ ಕುರಿತಂತೆ ಸೆಹ್ವಾಗ್ ಮಾಡಿರುವ ಟ್ವೀಟ್ ಇದೀಗ ವೈರಲ್ ಆಗಿದೆ.
ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಉಗ್ರರ ವಿರುದ್ಧದ ಕಾರ್ಯಚರಣೆಯಲ್ಲಿ ಇದೇ ಜನವರಿಯಿಂದ ಒಟ್ಟಾರೆ 200ಕ್ಕೂ ಹೆಚ್ಚು ಉಗ್ರರನ್ನು ಸದೆ ಬಡಿದಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಸೆಹ್ವಾಗ್ 200 ಉಗ್ರರನ್ನು ಕೊಲ್ಲುವ ಮೂಲಕ ದ್ವಿಶತಕ ಬಾರಿಸಿದ್ದೀರಿ ಧನ್ಯವಾದಗಳು...ಜೈ ಹಿಂದ್ ಎಂದು ಬರೆದಿದ್ದಾರೆ.
ಸೆಹ್ವಾಗ್ ರ ಈ ಟ್ವೀಟ್ ಗೆ ಸಾಕಷ್ಟು ಟ್ವೀಟರಿಗರು ಖುಷಿ ವ್ಯಕ್ತಪಡಿಸುತ್ತಾ ರೀ ಟ್ವೀಟ್ ಗಳನ್ನು ಮಾಡಿದ್ದಾರೆ. ಸಾವಿರಾರು ಅಭಿಮಾನಿಗಳು ಲೈಕ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian ArmyterroristsDouble Centuryದ್ವಿಶತಕVirender Sehwagವೀರೇಂದ್ರ ಸೆಹ್ವಾಗ್ಭಯೋತ್ಪಾದಕರುcongratulatesಭಾರತೀಯ ಸೇನೆಧನ್ಯವಾದ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


