ಪ್ರಸಾರ ಭಾರತಿಯ ಅಧ್ಯಕ್ಷರಾಗಿ ಕನ್ನಡಿಗ ಎ.ಸೂರ್ಯಪ್ರಕಾಶ್ ಪುನರಾಯ್ಕೆ
ಹಿರಿಯ ಪತ್ರಕರ್ತರಾದ ಎ.ಸೂರ್ಯಪ್ರಕಾಶ್ ಅವರನ್ನು ಪ್ರಸಾರ ಭಾರತಿ ಅಧ್ಯಕ್ಷರಾಗಿ ಎರಡನೇ ಅವಧಿಗೆ ಮರುನೇಮಕ ಮಾಡಲಾಗಿದೆ.

Published On :
ನವದೆಹಲಿ: ಹಿರಿಯ ಪತ್ರಕರ್ತರಾದ ಎ.ಸೂರ್ಯಪ್ರಕಾಶ್ ಅವರನ್ನು ಪ್ರಸಾರ ಭಾರತಿ ಅಧ್ಯಕ್ಷರಾಗಿ ಎರಡನೇ ಅವಧಿಗೆ ಮರುನೇಮಕ ಮಾಡಲಾಗಿದೆ.
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ನೇತೃತ್ವದ ಸಮಿತಿ ಸೂರ್ಯಪ್ರಕಾಶ್ ಹೆಸರನ್ನು ಶಿಫಾರಸ್ ಮಾಡಿದ್ದು ಇದರಂತೆ ಸ್ಮೃತಿ ಇರಾನಿ ನೇತೃತ್ವದ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ನೇಮಕ ಆದೇಶವನ್ನು ಹೊರಡಿಸಿದೆ. ಇವರ ಸೇವಾವಧಿ 2020ರ ಫೆಬ್ರುವರಿ 8 ರವರೆಗೆ ಇರುತ್ತದೆ.
ಪ್ರಸಾರಭಾರತಿಯು ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೊ ಕಾರ್ಯನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ.
ಹಾಸನದ ಅರಕಲಗೂಡು ಮೂಲದ ಹಿರಿಯ ಪತ್ರಕರ್ತರಾದ ಸೂರ್ಯಪ್ರಕಾಶ್ ಹಲವಾರು ಮುದ್ರನಾ ಮತ್ತು ವಿದ್ಯುನ್ಮಾನ ಮಾಧ್ಯಮ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ. ದೆಹಲಿ ಮೂಲದ ವಿವೇಕಾನಂದ ಇಂಟರ್ ನ್ಯಾಶನಲ್ ಫೌಂಡೇಶನ್ ಆಲೋಚನಾ ಕೃತಿ, ಸಲಹಾ ಸಮಿತಿಯ ವಿಶೇಷ ಫೆಲೋ ಹಾಗೂ ಸಲಹಾ ಸಮಿತಿಯ ಸದಸ್ಯರೂ ಆಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Prasar Bharatiಪ್ರಸಾರ ಭಾರತಿA Surya PrakashVice-President Venkaiah NaiduChairman of Prasar Bharatiಎ. ಸೂರ್ಯ ಪ್ರಕಾಶ್ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡುಪ್ರಸಾರ ಭಾರತಿ ಅಧ್ಯಕ್ಷ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


