ದೇಶ

ಮುಂಬೈ 'ಮಹಾಮಳೆ'ಗೆ ಕೊಚ್ಚಿ ಹೋಗಿದ್ದ ಖ್ಯಾತ ವೈದ್ಯ ಶವವಾಗಿ ಪತ್ತೆ

ವಾಣಿಜ್ಯ ನಗರ ಮುಂಬೈನಲ್ಲಿ ಸುರಿದ ಮಹಾಮಳೆಗೆ ಹಾಗೂ ಬಲವಾದ ಗಾಳಿಗೆ ಬಲಿಯಾಗಿದ್ದ ಖ್ಯಾತ ವೈದ್ಯರೊಬ್ಬರ ಮೃತದೇಹ ಎರಡು ದಿನಗಳ ಬಳಿಕ ಪತ್ತೆಯಾಗಿದೆ...

ಮುಂಬೈ 'ಮಹಾಮಳೆ'ಗೆ ಕೊಚ್ಚಿ ಹೋಗಿದ್ದ ಖ್ಯಾತ ವೈದ್ಯ ಶವವಾಗಿ ಪತ್ತೆ
ವೈದ್ಯ ದೀಪಕ್ ಅಮರಾಪುರ್ಕರ್
Published On :

ಮುಂಬೈ: ವಾಣಿಜ್ಯ ನಗರ ಮುಂಬೈನಲ್ಲಿ ಸುರಿದ ಮಹಾಮಳೆಗೆ  ಹಾಗೂ ಬಲವಾದ ಗಾಳಿಗೆ ಬಲಿಯಾಗಿದ್ದ ಖ್ಯಾತ ವೈದ್ಯರೊಬ್ಬರ ಮೃತದೇಹ ಎರಡು ದಿನಗಳ ಬಳಿಕ ಪತ್ತೆಯಾಗಿದೆ. 

ಮುಂಬೈನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ವೇಳೆ ನೀರು ತುಂಬಿದ್ದ ರಸ್ತೆಯಲ್ಲಿ ಖ್ಯಾತ ವೈದ್ಯರಾದ ದೀಪಕ್ ಅಮರಾಪುರ್ಕರ್ ಅವರು ನಡೆದು ಹೋಗುತ್ತಿದ್ದರು. ಈ ವೇಳೆ ಮ್ಯಾನ್ ಹೋಲ್ ಗೆ ಬಿದ್ದಿದ್ದರು. 

ಡಾ. ಅಮರಾಪುರ್ಕರ್ ಬಾಂಬೆ ಆಸ್ಪತ್ರೆಯಲ್ಲಿ ಸೀರಿಯರ್ ಗ್ಯಾಸ್ಟ್ರೋ ಎಂಟರೊಲಾಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು, ಎಲಿಫಿನ್ ಸ್ಟೋನ್ ರಸ್ತೆಯ ವರೆಗೂ ಕಾರಿನಲ್ಲಿ ಬಂದಿರುವ ವೈದ್ಯರು ಚಾಲಕನಿಗೆ ಮನೆಯವರೆಗೂ ಡ್ರಾಪ್ ಮಾಡುವಂತೆ ತಿಳಿಸಿದ್ದಾರೆ. ರಸ್ತೆ ಸಂಪೂರ್ಣವಾಗಿ ಆವೃತಗೊಂಡಿದ್ದರಿಂದ ಕಾರು ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಕಾಲ್ನಡಿಗೆ ಮೂಲಕ ಮನೆಗೆ ಹೋಗಲು ಕಾರಿನಿಂದ ಇಳಿದಿದ್ದಾರೆ. ಇದಾದ ಬಳಿಕ ವೈದ್ಯರು ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿತ್ತು. 

ರಸ್ತೆ ನೀರಿನಿಂದ ಆವೃತವಾಗಿದ್ದ ಹಿನ್ನಲೆಯಲ್ಲಿ ನಡೆದುಹೋಗುತ್ತಿದ್ದ ಸಂದರ್ಭದಲ್ಲಿ ವೈದ್ಯರು ಮ್ಯಾನ್ ಹೋಲ್ ಗೆ ಬಿದ್ದಿದ್ದರು ಎಂದು ಕೆಲ ಪ್ರತ್ಯಕ್ಷದರ್ಶಿಗಳು ಹೇಳಿದ್ದರು. ಸ್ಥಳದಲ್ಲಿ ವೈದ್ಯರು ಹಿಡಿದುಕೊಂಡಿದ್ದ ಛತ್ರಿ ಕೂಡ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ವೈದ್ಯರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಮುಂಬೈ ನಗರಪಾಲಿಕೆಗಳ ಸಿಬ್ಬಂದಿಗಳು ಮ್ಯಾನ್ ಹೋಲ್ ಬಳಿ ಭಾರೀ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದರು. ಆದರೂ, ಪತ್ತೆಯಾಗಿರಲಿಲ್ಲ. ಇದೀಗ ವೈದ್ಯರ ಮೃತದೇಹ ಮುಂಬೈನ್ ವೋರ್ಲಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.