ಇಸ್ರೋದ ಮೊದಲ ಸ್ವದೇಶಿ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ಉಡಾವಣೆ ವಿಫಲ
ಭಾರತೀಯ ಬಾಹ್ಯಾಕಾಶ ಸಂಸ್ಧೆ(ಇಸ್ರೋ)ಯ ಮಹತ್ವಾಕಾಂಕ್ಷಿಯ ಐಆರ್ಎನ್ಎಸ್ಎಸ್-1ಎಚ್ ಉಪಗ್ರಹ ಉಡಾವಣೆ ವಿಫಲವಾಗಿದ್ದು ಇಸ್ರೋಗೆ ಮೊದಲ ಹಿನ್ನೆಡೆಯಾಗಿದೆ...

Published On :
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಧೆ(ಇಸ್ರೋ)ಯ ಮಹತ್ವಾಕಾಂಕ್ಷಿಯ ಐಆರ್ಎನ್ಎಸ್ಎಸ್-1ಎಚ್ ಉಪಗ್ರಹ ಉಡಾವಣೆ ವಿಫಲವಾಗಿದ್ದು ಇಸ್ರೋಗೆ ಮೊದಲ ಹಿನ್ನೆಡೆಯಾಗಿದೆ.
ಇಸ್ರೋ ರಾತ್ರಿ 7 ಗಂಟೆ ಸುಮಾರಿಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿ ಎಕ್ಸ್ ಎಲ್ ಸರಣಿಯ ರಾಕೆಟ್ ಮೂಲಕ ಐಆರ್ಎನ್ಎಸ್ಎಸ್-1ಎಚ್ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಎರಡು ಹಂತಗಳಲ್ಲಿ ಉಡಾವಣೆ ಯಶಸ್ವಿಯಾಗಿದ್ದು ಮೂರನೇ ಹಂತದಲ್ಲಿನ ಹಿಟ್ ಶೀಟ್ ತೆರೆದುಕೊಳ್ಳದ ಕಾರಣ ಉಪಗ್ರಹ ಸಮುದ್ರಕ್ಕೆ ಬಿದ್ದಿದೆ.
ಇಸ್ರೋ ಇದೇ ಮೊದಲ ಬಾರಿಗೆ ಖಾಸಗಿ ಸಹಭಾಗಿತ್ವದಲ್ಲಿ ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿತ್ತು.
ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಿದ್ದರೆ ದಿಕ್ಸೂಚಿ ವ್ಯವಸ್ಥೆಗಾಗಿ ಭಾರತ ವಿದೇಶಿ ಉಪಗ್ರಹಗಳನ್ನು ಅವಲಂಭಿಸಬೇಕಿರಲಿಲ್ಲ. ಆದರೆ ಉಪಗ್ರಹ ಉಡಾವಣೆ ವಿಫಲಗೊಂಡಿರುವುದರಿಂದ ಇಸ್ರೋ ಮತ್ತೊಮ್ಮೆ ಉಪಗ್ರಹ ನಿರ್ಮಾಣಕ್ಕೆ ಕೈಹಾಕುವ ಸಾಧ್ಯತೆ ಇದೆ.
ಐಆರ್ಎನ್ ಎಸ್ಎಸ್- 1ಹೆಚ್ ಈ ಸರಣಿಯ 8ನೇ ಉಪಗ್ರಹವಾಗಿದ್ದು, ಸುಮಾರು 1,420 ಕೋಟಿ ರೂ. ವೆಚ್ಚದಲ್ಲಿ ಐಆರ್ಎನ್ಎಸ್ಎಸ್- 1ಹೆಚ್ ಉಪಗ್ರಹ ನಿರ್ಮಾಣ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Andhra PradeshISROಇಸ್ರೋಶ್ರೀಹರಿಕೋಟಾಆಂಧ್ರಪ್ರದೇಶSatish Dhawan Space CentreSri HarikotaIRNSS-1Hಐಎರ್ ಎನ್ ಎಸ್ ಎಸ್-1ಹೆಚ್ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


