ರಾಜಕೀಯದ "ಕಮಾಲ್" ಗೆ ರೆಡಿ ಎಂದ ಕಮಲ್ ಹಾಸನ್
ಕಮಲ್ ಹಾಸನ್ ಅವರು ಚುನಾವಣಾ ರಾಜಕೀಯಕ್ಕೆ ಧುಮುಕುಕೊಟ್ಟಿದ್ದಾರೆ ಎಂಬ ವದಂತಿಗಳು ಹಬ್ಬುತ್ತಿರುವಾಗಲೇ ಅವರು ತಾವು ರಾಜಕೀಯದಲ್ಲಿ ತೊಡಗುವುದನ್ನು ಕುರಿತು ಸ್ವತಹ ಹೇಳಿಕಿಒಂಡಿದ್ದಾರೆ

Published On :
ಕೊಯಮತ್ತೂರ್:: ಕಮಲ್ ಹಾಸನ್ ಅವರು ಚುನಾವಣಾ ರಾಜಕೀಯಕ್ಕೆ ಧುಮುಕುಕೊಟ್ಟಿದ್ದಾರೆ ಎಂಬ ವದಂತಿಗಳು ಹಬ್ಬುತ್ತಿರುವಾಗಲೇ ಅವರು ತಾವು ರಾಜಕೀಯದಲ್ಲಿ ತೊಡಗುವುದನ್ನು ಕುರಿತು ಸ್ವತಹ ಹೇಳಿಕಿಒಂಡಿದ್ದಾರೆ
ಕಮಲ್ ರಾಜಕೀಯ ಪಕ್ಷ ಸ್ಥಾಪನೆಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಲವು ದಿನಗಳಿಂದಲೂ ಊಹಾಪೋಹಗಳು ಹರಿಯುತ್ತಿದ್ದವ್ಯ್. ಅಲ್ಲದೆ ಕೆಲವರು ಕಮಲ್ ರನ್ನು ಕೇವಲ "ಟ್ವಿಟರ್ ಆಕ್ಟಿವಿಸ್ಟ್" ಎಂದು ಗಟೀಕಿಸಿದ್ದರು. ಆದರೆ ಈಗ ನಟ ನಿರ್ಮಾಪಕ ಕಮಲ ಹಾಸನ್ ನಾವು "ಟ್ವಿಟರ್ ಆಕ್ಟಿವಿಸ್ಟ್" ಆಗಿ ಉಳಿಯಲಾರೆ ಎನ್ನುವ ಮೂಲಕ ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ.
ಕಮಲ್ ತಮ್ಮ ಫ್ಯಾನ್ಸ್ ಕ್ಲಬ್ ಕಾರ್ಯಕರ್ತರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾತನಾಡಿ , ಅವರ ಮದುವೆ ಆಚರಣೆಯ ಬದಲಿಗೆ ತನ್ನ ರಾಜಕೀಯ ಪ್ರಯಾಣದ ಪ್ರಾರಂಭದ ಕುರಿತಂತೆ ನನ್ನ ಅಭಿಪ್ರಾಯಗಳನ್ನು ಪರಿಗಣಿಸಬೇಕೆಂದು ಬಯಸಿದರು.
"ಟ್ವಿಟರ್ ಅಥವಾ ಕೊಯಮತ್ತೂರಿನಿಂದ ರಾಜಕೀಯ ಪಯಣವು ಪ್ರಾರಂಬವಾಗುವುಉಉದು ಎಲ್ಲಿಂದ ಎನ್ನುವುದು ಮುಖ್ಯವಲ್ಲ ಆದರೆ ಅತಿ ಶೀಘ್ರದಲ್ಲಿ ನನ್ನ ಪ್ರಯಾಣ ಆರಂಭಗೊಳ್ಳಲಿದೆ" ಎನ್ನುತ್ತಾರೆ ಕಮಲ್.ರಾಜಕೀಯ ಪಕ್ಷಗಳ ನಾಯಕರ "ಟ್ವಿಟರ್ ನಾಯಗನ್" (ಸಾಮಾಜಿಕ ಮಾಧ್ಯಮದ ನಾಯಕ - ನಾಯಗನ್ ಎನ್ನುವುದು ಕಮಲ್ ರ ಪ್ರಸಿದ್ಧ ಚಿತ್ರದ ಹೆಸರು) ಎನ್ನುವ ಟೀಕೆಗೆ ಪ್ರತಿಯಾಗಿ ಕಮಲ್ ಈ ಮಾತನ್ನು ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವ ಕೆಟ್ಟ ರಾಜಕೀಯದ ಬಗ್ಗೆ ಅವರ ಹೇಳಿಕೆಗಳನ್ನು ಪುನರಾವರ್ತಿಸಿ ಅವರು "ರಾಜಕೀಯವನ್ನು ಬದಲಾಯಿಸುವುದು ನಮ್ಮ ಜವಾಬ್ದಾರಿ" ಎಂದರು.
"ಜವಾಬ್ದಾರಿಯುತ ಮತದಾರರಾಗಬೇಕೆಂದು ರಾಜ್ಯದ ಜನರನ್ನು ನಾನು ಕೇಳುತ್ತೇನೆ, ಈಗ ರಾಜಕೀಯದ ತುಂಬಾ ದುರುಳರೇ ತುಂಬಿದ್ದಾರೆ. ಓಟಿಗಾಗಿ ನೋಟು ಹಂಚುವುದು ಸಲ್ಲ." ಅವರು ನುಡಿದರು.
ಅವರು ಸಾರ್ವಜನಿಕ ಸೇವೆ ಖರ್ಚು ಮಾಡುವ ಬದಲು ಸರ್ಕಾರಿ ನಿಧಿಯನ್ನು ರಾಜಕಾರಣಿಗಳು ಸ್ವಂತಕ್ಕೆ ಬಳಸುತ್ತಾರೆ ಎಂದು ಅವರು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


