'ಸಂತಾನಹರಣ' ಮಾಡಿ ಇಂದಿರಾ ಅಧಿಕಾರ ಹೋಯ್ತು; 'ನೋಟು ಬ್ಯಾನ್' ನಿಂದ ಬಿಜೆಪಿ ಕಳೆದುಕೊಳ್ಳಲಿದೆ: ಟಿಎಂಸಿ
ಮೋದಿ ಅವರ ನೋಟು ಅಮಾನ್ಯೀಕರಣ ಯೋಜನೆ ಇಂದಿರಾಗಾಂಧಿ ಅವರ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಸಮಾನ ಎಂದು ಹೋಲಿಕೆ ಮಾಡಿದ್ದಾರೆ....

Published On :
ನವದೆಹಲಿ: ನೋಟು ಅಮಾನ್ಯೀಕರಣ ಎಂಬುದು ದೊಡ್ಡ ಪ್ಲಾಪ್ ಶೋ ಎಂದು ತೃಣಮೂಲ ಕಾಂಗ್ರೆಸ್ ಮುಖಂಡ ಡೆರೆಕ್ ಒ ಬ್ರೇನ್ ಟೀಕಿಸಿದ್ದಾರೆ.
ಮೋದಿ ಅವರ ನೋಟು ಅಮಾನ್ಯೀಕರಣ ಯೋಜನೆ ಇಂದಿರಾಗಾಂಧಿ ಅವರ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಸಮಾನ ಎಂದು ಹೋಲಿಕೆ ಮಾಡಿದ್ದಾರೆ.
ಸಂತಾನಹರಣ ಯೋಜನೆಯಿಂದಾಗಿ 1977ರ ಚುನಾವಣೆಯಲ್ಲಿ ಇಂದಿರಾಗಾಂಧಿ ಅಧಿಕಾರ ಕಳೆದುಕೊಂಡರು ಅದೇ ರೀತಿ, ನೋಟು ನಿಷೇಧ ಮಾಡಿರುವ ಬಿಜೆಪಿ 2019ರ ಲೋಕಸಭೆ ಚುನಾವಣೆಯಲ್ಲಿ ತನ್ನ ಅಧಿಕಾರ ಕಳೆದು ಕೊಳ್ಳಿಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ನೋಟು ಅಮಾನ್ಯೀಕರಣ ಸಂಪೂರ್ಣವಾಗಿ ವಿಫಲವಾಗಿದೆ. ನೋಟು ನಿಷೇಧಗೊಳಿಸಿದ ಮೊದಲ ದಿನದಿಂದಲೂ ಇಲ್ಲಿಯವರೆಗೂ ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ಇದೊಂದು ದೊಡ್ಡ ಪ್ಲಾಪ್ ಶೋ ಎಂದು ಹೇಳುತ್ತಲೇ ಬಂದಿದೆ. 21ನೇ ಶತಮಾನದ ಬಹು ದೊಡ್ಡ ಭ್ರಷ್ಟಾಚಾರ ಹಗರಣವಾಗಿದೆ ಎಂದು ಹೇಳಿದ್ದಾರೆ.
ಜನರನ್ನು ಮೂರ್ಖರನ್ನಾಗಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ನೋಟು ಅಮಾನ್ಯೀಕರಣದಿಂದಾಗಿ ಜನರಿಗೆ ಹಾಗೂ ದೇಶಕ್ಕೆ ಹಾನಿ ಉಂಟಾಗಿದೆ. ಇದಕ್ಕಾಗಿ ಪಕ್ಷ ಮುಂದಿನ ಚುನಾವಣೆಯಲ್ಲಿ ಬೆಲೆ ತೆರಬೇಕಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿTrinamool CongressIndira Gandhiಇಂದಿರಾ ಗಾಂಧಿತೃಣಮೂಲ ಕಾಂಗ್ರೆಸ್ಸಂತಾನ ಹರಣ ಶಸ್ತ್ರ ಚಿಕಿತ್ಸೆDemonetisationsterilisation programmeಅಮಾನ್ಯೀಕರಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


