ಭಾರತದ ಭೇಟಿಯನ್ನು ಯಶಸ್ವಿ ಎಂದ ನೇಪಾಳ ಪ್ರಧಾನಿ
ಇತ್ತೀಚೆಗಷ್ಟೇ ತಾವು ಕೈಗೊಂಡಿದ್ದ ಭಾರತ ಭೇಟಿ ಯಶಸ್ವಿಯಾಗಿದೆ ಎಂದು ನೇಪಾಳ ಪ್ರಧಾನಿ ಷೇರ್ ಬಹಾದ್ದೂರ್ ದೆವುಬಾ ಹೇಳಿದ್ದಾರೆ.

Published On :
ಕಠ್ಮಂಡು: ಇತ್ತೀಚೆಗಷ್ಟೇ ತಾವು ಕೈಗೊಂಡಿದ್ದ ಭಾರತ ಭೇಟಿ ಯಶಸ್ವಿಯಾಗಿದೆ ಎಂದು ನೇಪಾಳ ಪ್ರಧಾನಿ ಷೇರ್ ಬಹಾದ್ದೂರ್ ದೆವುಬಾ ಹೇಳಿದ್ದಾರೆ.
5 ದಿನಗಳ ಭಾರತ ಭೇಟಿಯ ಬಗ್ಗೆ ನೇಪಾಳ ಸಂಸತ್ ನಲ್ಲಿ ಮಾತನಾಡಿ ಮಾಹಿತಿ ನೀಡಿರುವ ಷೇರ್ ಬಹಾದ್ದೂರ್ ದೆವುಬಾ, ಭಾರತ ಪ್ರವಾಸ ಯಶಸ್ವಿಯಾಗಿದ್ದು, ನೇಪಾಳ- ಭಾರತ ಗಡಿ ಪ್ರದೇಶ ಜಲಾವೃತಗೊಂಡಿರುವುದು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಲವು ವಿಷಯಗಳನ್ನು ಚರ್ಚಿಸಲಾಗಿದ್ದು, ದ್ವಿಪಕ್ಷೀಯ ಸಂಬಂಧ ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ 5,000 ಮೆಘಾವ್ಯಾಟ್ ವಿದ್ಯುತ್ ಉತ್ಪಾದನೆಯ ಪಂಚೇಶ್ವರ್ ಮಲ್ಟಿಪರ್ಪಸ್ ಯೋಜನೆಯನ್ನು ಪೂರ್ಣಗೊಳಿಸುವ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿರುವುದಾಗಿ ಪ್ರಧಾನಿ ಷೇರ್ ಬಹಾದ್ದೂರ್ ದೆವುಬಾ ನೇಪಾಳ ಸಂಸತ್ ಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


