ಸಿಐಎಗೆ ಆಧಾರ್ ಅಂಕಿಅಂಶಗಳು ಸಿಗುವುದಿಲ್ಲ: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ
ಆಧಾರ್ ಕಾರ್ಡು ವ್ಯವಸ್ಥೆ ಕಠಿಣ ಭದ್ರತಾ ಲಕ್ಷಣಗಳನ್ನು ಹೊಂದಿದ್ದು ಯಾವುದೇ ಅಂಕಿಅಂಶಗಳು...

Published On :
ನವದೆಹಲಿ:ಆಧಾರ್ ಕಾರ್ಡು ವ್ಯವಸ್ಥೆ ಕಠಿಣ ಭದ್ರತಾ ಲಕ್ಷಣಗಳನ್ನು ಹೊಂದಿದ್ದು ಯಾವುದೇ ಅಂಕಿಅಂಶಗಳು ಅನಧಿಕೃತವಾಗಿ ವರ್ಗಾವಣೆಯಾಗುವುದಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ತಿಳಿಸಿದೆ.
ಆಧಾರ್ ಬಯೋಮೆಟ್ರಿಕ್ ಪಡೆಯುವ ವ್ಯವಸ್ಥೆ ನಮ್ಮ ದೇಶದಲ್ಲಿಯೇ ಅಭಿವೃದ್ಧಿಪಡಿಸಲಾಗಿದ್ದು, ಅದರಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯಿದೆ. ಹೀಗಾಗಿ ಅನಧಿಕೃತವಾಗಿ ಅಂಕಿಅಂಶಗಳು, ದಾಖಲೆಗಳು ವರ್ಗಾವಣೆಯಾಗುವ ಸಾಧ್ಯತೆಗಳಿಲ್ಲ ಎನ್ನುತ್ತದೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ.
ವಿಕಿಲೀಕ್ಸ್ ನಲ್ಲಿ ಮೊನ್ನೆ 25ರಂದು ಪ್ರಕಟಗೊಂಡ ವರದಿಯಂತೆ ಅಮೆರಿಕಾದ ಗುಪ್ತಚರ ಸಂಸ್ಥೆಯಾದ ಸಿಐಎ, ಕ್ರಾಸ್ ಮ್ಯಾಚ್ ಟೆಕ್ನಾಲಜಿಸ್ ಒದಗಿಸಿದ ತಂತ್ರಜ್ಞಾನವನ್ನು ಬಳಸುತ್ತದೆ. ಕಾಕತಾಳೀಯವೆಂಬಂತೆ ಇದೇ ಕಂಪೆನಿ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ಸಹ ಸೇವೆ ಒದಗಿಸುತ್ತದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ, ಆಧಾರ್ ಕಾರ್ಡಿನ ಮೂಲಕ ವ್ಯಕ್ತಿಯ ದಾಖಲೆಗಳು ಮತ್ತು ಮಾಹಿತಿಗಳನ್ನು ಸೋರಿಕೆ ಮಾಡಲಾಗುತ್ತಿದೆ ಎಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಮಾಹಿತಿ ನೀಡುತ್ತಿವೆ ಎಂದು ಸ್ಪಷ್ಟಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CIAಸಿಐಎಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಆಧಾರ್ ಮಾಹಿತಿAadhara dataUnique Identification Authority of India (UIDAI)
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


