ರಾಮ್ ರಹೀಮ್ 'ಸರಳ ಜೀವಿ', ವಿನಾಕಾರಣ ಅವರಿಗೆ ಕಿರುಕುಳ ನೀಡಲಾಗುತ್ತಿದೆ: ಸಾಕ್ಷಿ ಮಹಾರಾಜ್
ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರು ಸರಳ ಜೀವಿಯಾಗಿದ್ದು, ವಿನಾಕಾರಣ ಅವರಿಗೆ ಕಿರುಕುಳವನ್ನು ನೀಡಲಾಗುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ...

Published On :
ಲಖನೌ: ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರು ಸರಳ ಜೀವಿಯಾಗಿದ್ದು, ವಿನಾಕಾರಣ ಅವರಿಗೆ ಕಿರುಕುಳವನ್ನು ನೀಡಲಾಗುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ಪಕ್ಷವನ್ನು ಮುಜುಗರಕ್ಕೀಡು ಮಾಡಿದ್ದಾರೆ.
15 ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ಅವರು ದೋಷಿ ಎಂದು ನಿನ್ನೆಯಷ್ಟೇ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು, ರಾಮ್ ರಹೀಮ್ ಅವರು ಸರಳ ಜೀವಿಯಾಗಿದ್ದು, ಅವರ ವಿರುದ್ಧ ನ್ಯಾಯಾಲಯದ ತೀರ್ಪು ಒಪ್ಪುವಂತಹದ್ದಲ್ಲ ಎಂದು ಹೇಳಿದ್ದಾರೆ.
ಗುರ್ಮಿತ್ ಅವರ ವಿರುದ್ಧ ಒಬ್ಬ ವ್ಯಕ್ತಿ ಮಾತ್ರ ಆರೋಪ ಮಾಡುತ್ತಿದ್ದಾರೆ. ಆದರೆ, ಕೋಟ್ಯಾಂತರ ಜನರು ಗುರ್ಮಿತ್ ರನ್ನು ದೇವರಂತೆ ನೋಡುತ್ತಿದ್ದಾರೆ. ಅವರನ್ನು ಬೆಂಬಲಿಸುತ್ತಿದ್ದಾರೆ. ಹೀಗಿರುವಾಗ ಒಬ್ಬ ವ್ಯಕ್ತಿ ಅನಿಸಿಕೆ ಸರಿಯೇ ಅಥವಾ ಕೋಟ್ಯಾಂತರ ಜನರ ಅಭಿಪ್ರಾಯಗಳು ಸರಿಯೇ? ಎಂದು ಪ್ರಶ್ನಿಸಿದ್ದಾರೆ.
ನ್ಯಾಯಾಲಯದ ಮೇಲೆ ನನಗೆ ಗೌರವವಿದೆ. ಆದರೆ, ನ್ಯಾಯಾಲಯ ಆರೋಪ ಮಾಡಿದ ವ್ಯಕ್ತಿಯ ಮಾತುಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದೆಯೇ ಹೊರತು ಕೋಟ್ಯಾಂತರ ಜನರ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಗುರ್ಮಿತ್ ಅವರ ವಿರುದ್ಧ ಆದೇಶ ಹೊರ ಬೀಳುತ್ತಿದ್ದಂತೆಯೇ ರಾಜ್ಯದಲ್ಲಿ ಹಿಂಸಾಚಾರ ಆರಂಭಗೊಂಡಿದೆ. ಹಲವಾರು ಜನರು ಸಾವನ್ನಪ್ಪುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾಗಿದೆ. ಇದನ್ನು ನ್ಯಾಯಾಲಯ ಪರಿಗಣಿಸುವುದಿಲ್ಲವೇ...? ರಾಜ್ಯದಲ್ಲಿ ಒಂದು ವೇಳೆ ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆದಿದ್ದೇ ಆದರೆ, ಅದಕ್ಕೆ ಗುರ್ಮಿತ್ ಅವರು ಜವಾಬ್ದಾರರಾಗುವುದಿಲ್ಲ. ತೀರ್ಪು ನೀಡಿದ ನ್ಯಾಯಾಲಯವೇ ಜವಾಬ್ದಾರಿಯಾಗುತ್ತದೆ.
ಜಮ್ಮಾ ಮಸೀದಿಯ ಶಾಹಿ ಇಮಾಮ್ ವಿರುದ್ಧವೂ ಸಾಕಷ್ಟು ಪ್ರಕರಣಗಳಿವೆ. ಹಲವಾರು ಪ್ರಕರಣಗಳಲ್ಲಿ ಆವರು ಪೊಲೀಸರಿಗೆ ಬೇಕಾಗಿದ್ದಾರೆ, ಸುಪ್ರೀಂಕೋರ್ಟ್ ಆಗಲೀ ಹೈಕೋರ್ಟ್ ಆಗಲೀ ಏಕೆ ಶಾಹಿ ಇಮಾಮ್ ವಿರುದ್ಧ ಸಮನ್ಸ್ ಹೊರಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಅತ್ಯಾಚಾರbjpಬಿಜೆಪಿHaryanaಹರ್ಯಾಣಸಿಬಿಐrape caseSakshi Maharajಸಾಕ್ಷಿ ಮಹಾರಾಜ್RamRahim Verdictರಾಮ್ ರಹೀಮ್ ಸಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


