ದೇಶ

ರಾಮ್ ರಹೀಂ ಆಶ್ರಮಕ್ಕೆ ಸೇನೆ ಲಗ್ಗೆ, ಕುರುಕ್ಷೇತ್ರದ 2 ಆಶ್ರಮ ಸೈನಿಕರ ವಶಕ್ಕೆ!

ಮಹತ್ವದ ಬೆಳವಣಿಗೆಯಲ್ಲಿ ಹರ್ಯಾಣದ ಸಿರ್ಸಾದಲ್ಲಿರುವ ರಾಮ್ ರಹೀಂ ಸಿಂಗ್ ಅವರ ಪ್ರಧಾನ ಆಶ್ರಮಕ್ಕೆ ಸೇನಾಪಡೆಯ ಯೋಧರು ಲಗ್ಗೆ ಹಾಕಿದ್ದು, ಕುರುಕ್ಷೇತ್ರದಲ್ಲಿರುವ 2 ಆಶ್ರಮಗಳಿಗೆ ವಶಕ್ಕೆ ಪಡೆದ ಬೀಗ ಜಡಿದಿದ್ದಾರೆ ಎಂದು ತಿಳಿದುಬಂದಿದೆ.

ರಾಮ್ ರಹೀಂ ಆಶ್ರಮಕ್ಕೆ ಸೇನೆ ಲಗ್ಗೆ, ಕುರುಕ್ಷೇತ್ರದ 2 ಆಶ್ರಮ ಸೈನಿಕರ ವಶಕ್ಕೆ!
ಆಶ್ರಮ ಪ್ರವೇಶಿಸಿದ ಸೇನಾಪಡೆ
Published On :

ಚಂಡೀಘಡ: ಮಹತ್ವದ ಬೆಳವಣಿಗೆಯಲ್ಲಿ ಹರ್ಯಾಣದ ಸಿರ್ಸಾದಲ್ಲಿರುವ ರಾಮ್ ರಹೀಂ ಸಿಂಗ್ ಅವರ ಪ್ರಧಾನ ಆಶ್ರಮಕ್ಕೆ ಸೇನಾಪಡೆಯ ಯೋಧರು ಲಗ್ಗೆ ಹಾಕಿದ್ದು, ಕುರುಕ್ಷೇತ್ರದಲ್ಲಿರುವ 2 ಆಶ್ರಮಗಳಿಗೆ ವಶಕ್ಕೆ ಪಡೆದ ಬೀಗ ಜಡಿದಿದ್ದಾರೆ ಎಂದು ತಿಳಿದುಬಂದಿದೆ.

ಹಿಂಸಾಚಾರ ಭುಗಿಲೆದ್ದ ಬಳಿಕ ಹರ್ಯಾಣ ಹೈಕೋರ್ಟ್ ಬಾಬಾ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚನೆ ನೀಡಿದ ಬೆನ್ನಲ್ಲೇ ಆಶ್ರಮವನ್ನು ಸೇನೆ ಸುತ್ತುವರೆದಿತ್ತಾದರೂ, ಆಶ್ರಮದಲ್ಲಿದ್ದ ಭಕ್ತರನ್ನು ನಿಯಂತ್ರಿಸಿಕೊಂಡು ಇಂದು ಬೆಳಗ್ಗೆ ಆಶ್ರಮಕ್ಕೆ ಲಗ್ಗೆ ಇಟ್ಟಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಸಿರ್ಸಾದಲ್ಲಿರುವ ಸಂಪೂರ್ಣ ಡೇರಾ ಸಚ್ಚಾ ಸೌಧ ಪ್ರಧಾನ ಆಶ್ರಮವನ್ನು ಸೇನಾಪಡೆಗಳು ವಶಕ್ಕೆ ಪಡೆದಿದ್ದು, ಆಶ್ರಮದಲ್ಲಿರುವ ಭಕ್ತರನ್ನು ನಿಧಾನವಾಗಿ ತೆರವುಗೊಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ರಾತ್ರಿಯಿಂದಲೇ ಆಶ್ರಮವನ್ನು ಸುತ್ತುವರೆದಿದ್ದ ಸೇನೆ, ಭಕ್ತರು ಕೂಡಲೇ ಆಶ್ರಮವನ್ನು ತೊರೆಯುವಂತೆ ಸೂಚನೆ ನೀಡಿದ್ದರು. ಅದರಂತೆ ಕೆಲ ಭಕ್ತರು ರಾತ್ರಿಯೇ ಆಶ್ರಮ ತೊರೆದಿದ್ದು, ಇನ್ನೂ ಕೆಲ ಭಕ್ತರು ಅಲ್ಲೇ ಉಳಿಯಲು ನಿರ್ಧರಿಸಿದ್ದರಂತೆ. ಹೀಗಾಗಿ ಸೇನೆಯ ಆಶ್ರಮ ಪ್ರವೇಶ ತಡವಾಯಿತು ಎಂದು ಮೂಲಗಳು ತಿಳಿಸಿವೆ. ಇನ್ನು ಆಶ್ರಮ ಪ್ರವೇಶ ಮಾಡಿರುವ ಸೈನಿಕರು ಸಂಪೂರ್ಣ ಆಶ್ರಮವನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡಿದ್ದಾರೆ. ಅಂತೆಯೇ ಹರ್ಯಾಣದ ಕುರುಕ್ಷೇತ್ರದಲ್ಲಿರುವ ಆಶ್ರಮದ 2 ಉಪ ಆಶ್ರಮಗಳ ಮೇಲೂ ಸೇನಾಪಡೆ ಲಗ್ಗೆ ಇಟ್ಟಿದ್ದು, ಈ ಆಶ್ರಮಗಳಲ್ಲಿದ್ದ ಭಕ್ತರನ್ನು ತೆರವುಗೊಳಿಸಿದ್ದಾರೆ. ಅಂತೆಯೇ ಎರಡೂ ಅಶ್ರಮಕ್ಕೂ ಬೀಗ ಜಡಿದಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.