ಗುರುಗ್ರಾಮ್: ಕ್ಯಾಬ್ ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
ಆಸ್ಪತ್ರೆಗೆ ಕ್ಯಾಬ್ ನಲ್ಲಿ ಹೋದ ಮಹಿಳೆ ವಾಹನದಲ್ಲಿಯೇ ಮಾರ್ಗ ಮಧ್ಯೆ ಮಗುವಿಗೆ ಜನ್ಮ ನೀಡಿದ ಘಟನೆ...

Published On :
ಗುರುಗ್ರಾಮ್: ಆಸ್ಪತ್ರೆಗೆ ಕ್ಯಾಬ್ ನಲ್ಲಿ ಹೋದ ಮಹಿಳೆ ವಾಹನದಲ್ಲಿಯೇ ಮಾರ್ಗ ಮಧ್ಯೆ ಮಗುವಿಗೆ ಜನ್ಮ ನೀಡಿದ ಘಟನೆ ಗುರುಗ್ರಾಮ್ ನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ.
ತಾವು ಆಸ್ಪತ್ರೆಗೆ ಹೋದರೆ ಅಲ್ಲಿ ಸುಮಾರು ಒಂದು ಗಂಟೆಯವರೆಗೆ ನಮಗೆ ದಾಖಲಾತಿ ಸಿಗಲಿಲ್ಲ. ಹೀಗಾಗಿ ಕ್ಯಾಬ್ ಒಳಗೆಯೇ ತಮ್ಮ ಪತ್ನಿ ಮಗುವಿಗೆ ಜನ್ಮ ನೀಡಿದಳು ಎಂದು ಪತಿ ರಮೇಶ್ ಯಾದವ್ ತಿಳಿಸಿದ್ದಾರೆ. ವಾಹನದಲ್ಲಿ ಹೆತ್ತ ತಾಯಿ ಮತ್ತು ಮಗುವಿಗೆ ಸೋಂಕು ತಗಲುವ ಸಾಧ್ಯತೆಯಿದೆ ಎಂದು ರಮೇಶ್ ಯಾದವ್ ಆರೋಪಿಸಿದ್ದಾರೆ.
ಆದರೆ ಪ್ರವೇಶ ನಿರಾಕರಿಸಲು ತಡಮಾಡಲಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳುತ್ತಾರೆ.
ನನ್ನ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಕ್ಯಾಬ್ ಮಾಡಿಸಿ ಮನೆಯಿಂದ 2 ಕಿಲೋ ಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋದೆವು, ಆದರೆ ದಾರಿ ಮಧ್ಯೆಯೇ ಮಗುವನ್ನು ಹೆತ್ತಳು, ಆಸ್ಪತ್ರೆಗೆ ಹೋಗಿ ಹೆರಿಗೆ ವಾರ್ಡ್ ಗೆ ದಾಖಲಾತಿ ಕೇಳಿದರೆ ನಿರಾಕರಿಸಿದರು ಎಂದರು.
ಹೆರಿಗೆ ವಾರ್ಡ್ ನಲ್ಲಿ ಸ್ವಲ್ಪ ಹೊತ್ತು ಕಾಯುವಂತೆ ಹೇಳಿದರು, ಆದರೆ ಒಂದು ಗಂಟೆ ಕಾದರೂ ಪ್ರವೇಶ ನೀಡಲಿಲ್ಲ. ನಂತರ ಆಸ್ಪತ್ರೆಯ ಪ್ರಧಾನ ವೈದ್ಯಾಧಿಕಾರಿಯನ್ನು ಭೇಟಿ ಮಾಡಿದಾಗ ದಾಖಲು ಮಾಡಿಕೊಂಡರು ಎಂದು ರಮೇಶ್ ಯಾದವ್ ವಿವರಿಸಿದರು.
ತಾಯಿ ಮತ್ತು ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪ್ರಧಾನ ವೈದ್ಯಾಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


