ದೇಶ

ಉತ್ಕಲ್ ರೈಲು ಅಪಘಾತ: ತಪ್ಪಿತಸ್ಥರ ವಿರುದ್ಧ ಸಂಜೆಯೊಳಗೆ ಕ್ರಮ ಕೈಗೊಳ್ಳಿ-ಸುರೇಶ್ ಪ್ರಭು

ಉತ್ಕಲ್ ಎಕ್ಸ್ ಪ್ರೆಸ್ ಅಪಘಾತ ಪ್ರಕರಣಕ್ಕೆ ಕಾರಣವಾದವರ ವಿರುದ್ಧ ಸಂಜೆಯೊಳಗೆ ಕ್ರಮ ಕೈಗೊಳ್ಳಿ ಎಂದು ರೈಲ್ವೆ ಅಧಿಕಾರಿಗಳಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಸೂಚನೆ ನೀಡಿದ್ದಾರೆ.

ಉತ್ಕಲ್ ರೈಲು ಅಪಘಾತ: ತಪ್ಪಿತಸ್ಥರ ವಿರುದ್ಧ ಸಂಜೆಯೊಳಗೆ ಕ್ರಮ ಕೈಗೊಳ್ಳಿ-ಸುರೇಶ್ ಪ್ರಭು
ಉತ್ಕಲ್ ಎಕ್ಸ್ ಪ್ರೆಸ್
Published On :
ನವದೆಹಲಿ: ಉತ್ಕಲ್ ಎಕ್ಸ್ ಪ್ರೆಸ್ ಅಪಘಾತ ಪ್ರಕರಣಕ್ಕೆ ಕಾರಣವಾದವರ ವಿರುದ್ಧ ಸಂಜೆಯೊಳಗೆ ಕ್ರಮ ಕೈಗೊಳ್ಳಿ ಎಂದು ರೈಲ್ವೆ ಅಧಿಕಾರಿಗಳಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಸೂಚನೆ ನೀಡಿದ್ದಾರೆ. 
ರೈಲ್ವೆ ಮಂಡಳಿ ಅಧಿಕಾರಿ ಕೆ ಮಿತ್ತಲ್ ಅವರಿಗೆ ಸುರೇಶ್ ಪ್ರಭು ಸೂಚನೆ ನೀಡಿದ್ದು, ಮೇಲ್ನೋಟದ ಸಾಕ್ಷ್ಯಾಧಾರಗಳ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಲು ಸುರೇಶ್ ಪ್ರಭು ಸೂಚಿಸಿದ್ದಾರೆ. ಇದೇ ವೇಳೆ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸುತ್ತಿರುವುದಾಗಿ ಸುರೇಶ್ ಪ್ರಭು ಹೇಳಿದ್ದು, ರೈಲ್ವೆ ಮಾರ್ಗವನ್ನು ಪುನಃಸ್ಥಾಪಿಸುವ ಕೆಲಸವನ್ನು ತ್ವರಿತಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಈಗಾಗಲೇ 7 ಬೋಗಿಗಳನ್ನು ತೆರವುಗೊಳಿಸಲಾಗಿದೆ, ಪರಿಸ್ಥಿತಿಯನ್ನು ಖುದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.