ದೇಶ

ಎನ್ಐಎ ದಾಳಿಗಳಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ಕಡಿಮೆಯಾಗಿದೆ: ರಾಜನಾಥ ಸಿಂಗ್

ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ದಾಳಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟ ಪ್ರಕರಣಗಳು ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಭಾನುವಾರ ಹೇಳಿದ್ದಾರೆ...

ಎನ್ಐಎ ದಾಳಿಗಳಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ಕಡಿಮೆಯಾಗಿದೆ: ರಾಜನಾಥ ಸಿಂಗ್
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್
Published On :
ಲಖನೌ: ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ದಾಳಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟ ಪ್ರಕರಣಗಳು ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಭಾನುವಾರ ಹೇಳಿದ್ದಾರೆ. 
ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕಚೇರಿ ಹಾಗೂ ಸಂಕೀರ್ಣವನ್ನು ಉದ್ಘಾಟಿಸಿದ ಬಳಿಕ ಮಾತನಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್ಐಎ ಅಧಿಕಾರಿಗಳ ಪಾತ್ರವನ್ನು ನೀವು ನೋಡಿರಬಹುದು. ಎನ್ಐಎ ಕಾರ್ಯಾಚರಣೆಗಳಿಂದಾಗಿ ಕಲ್ಲು ತೂರಾಟ ಪ್ರಕರಣಗಳು ಕಡಿಮೆಯಾಗಿದೆ. ದೇಶದ ಭದ್ರತೆಗೆ ನಾವು ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದು, ಇದಕ್ಕಾಗಿ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈಗಾಗಲೇ ನಾವು ಹಲವು ಸವಾಲುಗಳನ್ನು ಸ್ವೀಕರಿಸಿದ್ದು, ಕಳೆದ ಮೂರು ವರ್ಷಗಳಿಂದ ನಕ್ಸಲ್, ಭಯೋತ್ಪಾದನೆ ಮತ್ತು ಉಗ್ರತ್ವ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 
ನಕ್ಸಲ್, ಭಯೋತ್ಪಾದನೆ ಹಾಗೂ ಉಗ್ರತ್ವದ ವಿರುದ್ಧದ ಈ ಹೋರಾಟದಲ್ಲಿ ನಾವು ಗೆಲವು ಸಾಧಿಸುತ್ತೇವೆ. ಕಳೆದ ಮೂರು ವರ್ಷಗಳಲ್ಲಿ ಶೇ.75 ರಷ್ಟು ಭಯೋತ್ಪಾದನೆ ಕಡಿತಗೊಂಡಿದೆ. ಶೇ.35-40 ರಷ್ಟು ನಕ್ಸಲ್ ದಾಳಿಗಳು ಕಡಿಮೆಗೊಂಡಿದೆ. ನಕಲಿ ನೋಡು ಹಾಗೂ ಭಯೋತ್ಪಾದನೆ ನೀಡಲಾಗುತ್ತಿರುವ ಆರ್ಥಿಕ ನೆರವುಗಳ ಮೇಲೆ ಕಡಿವಾಣ ಹಾಕಿದರೆ, ಇದರಿಂದಾಗಿ ಭಯೋತ್ಪಾದನೆ ಮೇಲೆ ಭಾರೀ ಹೊಡೆತ ಬೀಳುತ್ತದೆ. ಎನ್ಐಎ ಉತ್ತಮವಾದ ಕೆಲಸ ಮಾಡುತ್ತಿದ್ದು, ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವವರಿಗೆ ಇದರಿಂದ ಭಯ ಉಂಟಾಗಿದೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಲಹೆಯೊಂದನ್ನು ನೀಡಿದ್ದು, 6 ತಿಂಗಳಿಗೊಮ್ಮೆ ಎನ್ಐಎ ಹಾಗೂ ರಾಜ್ಯದ ಸಂಸ್ಥೆಗಳು ಸಭೆ ನಡೆಸಬೇಕೆಂದು ಹೇಳಿದರು. 
ಈ ಸಲಹೆಗೆ ಪ್ರತಿಕ್ರಿಯೆ ನೀಡಿರುವ ರಾಜನಾಥ ಸಿಂಗ್ ಅವರು, ಸಹಕಾರಗಳಿಲ್ಲದೆಯೇ ಯಶಸ್ಸುಗಳಿಸಲು ಸಾಧ್ಯವೇ ಇಲ್ಲ. ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವುದು ಸುಧೀರ್ಘ ಪ್ರಕ್ರಿಯೆಗಳಾಗಿವೆ ಎಂದು ತಿಳಿಸಿದ್ದಾರೆ. 
ಎನ್ಐಎ ಅಧಿಕಾರಿಗಳು 165 ಪ್ರಕರಗಳನ್ನು ತನಿಖೆ ನಡೆಸುತ್ತಿದ್ದು, ವೈಜ್ಞಾನಿಕ ತನಿಖೆಯಲ್ಲಿ ಶೇ.95 ರಷ್ಟು ಅಪರಾಧಗಳು ಸಾಬೀತಾಗಿದೆ ಎಂದಿದ್ದಾರೆ. 
ಬಳಿಕ ಮಾತನಾಡಿರುವ ರಕ್ಷಣಾ ಸಚಿವ ಅರುಣ್ ಜೇಟ್ಲಿಯವರು, ಎನ್ಐಎ ದಾಳಿ ನಡೆಸುತ್ತಿರುವುದರಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ತಮ್ಮ ಚಟುವಟಿಕೆಗಳನ್ನು ನಡೆಸಲು ಬಹಳ ಸಂಕಷ್ಟಗಳು ಎದುರಾಗಿದೆ ಎಂದಿದ್ದಾರೆ. 
ನೋಟಿ ನಿಷೇಧ ಹಾಗೂ ವಿದೇಶಗಳಿಂದ ಪ್ರತ್ಯೇಕತಾವಾದಿಗಳು ಪಡೆಯುತ್ತಿರುವ ಆರ್ಥಿಕ ನೆರವುಗಳ ಮೇಲಿನ ದಾಳಿಗಳಿಂದಾಗಿ ಪ್ರತ್ಯೇಕತಾವಾದಿಗಳು ಕಂಗಾಲಾಗಿದ್ದಾರೆ. ಇದೀಗ 25-50 ಜನರನ್ನು ಒಗ್ಗೂಡಿಸಲು ಪ್ರತ್ಯೇಕತಾವಾದಿಗಳಿಗೆ ಕಷ್ಟವಾಗಿ ಹೋಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.