ನನ್ನ ಆರೋಗ್ಯ ಸ್ಥಿರವಾಗಿದೆ, ಕೆಲವರು ಉದ್ದೇಶಪೂರ್ವಕವಾಗಿ ವದಂತಿ ಹಬ್ಬಿಸುತ್ತಿದ್ದಾರೆ: ಪರಿಕ್ಕರ್
ಆಗಸ್ಟ್ 23 ರಂದು ಉಪ ಚುನಾವಣೆ ಇರುವುದರಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶ ಪೂರ್ವಕವಾಗಿ ನನ್ನ ಆರೋಗ್ಯದ ಬಗ್ಗೆ ಸುಳ್ಳು ವದಂತಿಗಳನ್ನು ..

Published On :
ಪಣಜಿ: ಆಗಸ್ಟ್ 23 ರಂದು ಉಪ ಚುನಾವಣೆ ಇರುವುದರಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶ ಪೂರ್ವಕವಾಗಿ ನನ್ನ ಆರೋಗ್ಯದ ಬಗ್ಗೆ ಸುಳ್ಳು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸ್ಪಷ್ಟ ಪಡಿಸಿದ್ದಾರೆ.
ಇತ್ತಿಚೆಗೆ ಅಂಜಿಯೋ ಪ್ಲಾಸ್ಟಿ ಮೂಲಕ ಸಣ್ಣ ಬ್ಲಾಕ್ ವೊಂದಕ್ಕೆ ಚಿಕಿತ್ಸೆ ಪಡೆಯಲಾಗಿತ್ತು, ನಾನು ಪ್ರತಿದಿನ ಚೆಕ್ ಅಪ್ ಗಾಗಿ ಹೋಗುತ್ತಿದ್ದೇನೆ. ಎಂಟು ಹತ್ತು ವರ್ಷಗಳ ಹಿಂದೆ ನನಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು, ಅದಕ್ಕಾಗಿ ನಾನು ರೆಗ್ಯುಲರ್ ಚೆಕ್ ಅಪ್ ಗಾಗಿ ತೆರಳಿದ್ದೆ. ಸಣ್ಣದೊಂದು ಬ್ಲಾಕ್ ಇರುವುದಾಗಿ ವೈದ್ಯರು ಆಂಜಿಯೋಗ್ರಫಿ ಮಾಡಬೇಕೆಂದು ಹೇಳಿದ್ದರು. ಅದಾದ ಮೂರು ನಾಲ್ಕು ಗಂಟೆಗಳಲ್ಲಿ ನಾನು ಆಸ್ಪತ್ರೆಯಿಂದ ಹೊರ ಬಂದೆ, ಅದೊಂದು ಸಣ್ಣ ಆರೋಗ್ಯ ಸಮಸ್ಯೆ, ಒಟ್ಟಾರೆ ನನ್ನ ಆರೋಗ್ಯ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ನಾನು ನನ್ನ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದೇನೆ, ನಾನು ದೆಹಲಿಯಲ್ಲಿದ್ದಾಗ 82 ಕೆಜಿಯಿದ್ದೆ. 8 ಕೆಜಿ ಅತಿಯಾದ ತೂಕವಿತ್ತು. ಇಂದು ನಾನು 75 ಕೆಜಿ ಇದ್ದು, ನನ್ನ ಎತ್ತರಕ್ಕೆ ಸರಿಯಾದ ತೂಕ ಹೊಂದಿದ್ದೇನೆ, ಯಾರು ಈ ಬಗ್ಗೆ ಚಿಂತೆ ಮಾಡಬಾರದು, ನನ್ನ ಆರೋಗ್ಯದ ಬಗ್ಗೆ ನಾನು ಗಮನ ವಹಿಸುತ್ತೇನೆ ಎಂದು ಹೇಳಿದ್ದಾರೆ,
ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ನಮಗೆ ಚಬ್ಬಿ ಯಾಗಿರುವ ಮಕ್ಕಳು ತುಂಬಾ ಇಷ್ಟವಾಗುತ್ತಾರೆ, ಆದರೆ ಅಂತವರು ಆರೋಗ್ಯವಾಗಿರಬೇಕು, ಕೆಲ ಮಕ್ಕಳ ಟಮೋಟೋ ರೀತಿ ಚೆನ್ನಾಗಿರುತ್ತಾರೆ, ಅದರೆ ಅವರು ಆರೋಗ್ಯ ವಂತರಾಗಿರುವುದಿಲ್ಲ ಎಂದು ಪರಿಕ್ಕರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


