ದೇಶ

ಮಧ್ಯರಾತ್ರಿ ಕಿರಣ್ ಬೇಡಿ ಬೈಕ್ ರೈಡ್: ನಗರ ಸುರಕ್ಷತೆ ಅರಿಯಲು ರಹಸ್ಯ ಸಂಚಾರ!

ರಾತ್ರಿಯ ವೇಳೆಯಲ್ಲಿ ಜನರ ಸುರಕ್ಷತೆಗಾಗಿ ಪೊಲೀಸರು ಗಸ್ತು ತಿರುಗುತ್ತಾರೆ. ಆದರೆ, ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಪುದುಚೇರಿ ಉಪರಾಜ್ಯಪಾಲೆ ಕಿರಣ್ ಬೇಡಿ, ಮಾರುವೇಷದಲ್ಲಿ ತಾವೇ ಸ್ವತಃ ಗಸ್ತು ತಿರುಗುವ ಮೂಲಕ ಮಹಿಳೆಯರ...

ಮಧ್ಯರಾತ್ರಿ ಕಿರಣ್ ಬೇಡಿ ಬೈಕ್ ರೈಡ್: ನಗರ ಸುರಕ್ಷತೆ ಅರಿಯಲು ರಹಸ್ಯ ಸಂಚಾರ!
ಮಧ್ಯರಾತ್ರಿ ಕಿರಣ್ ಬೇಡಿ ಬೈಕ್ ರೈಡ್: ನಗರ ಸುರಕ್ಷತೆ ಅರಿಯಲು ರಹಸ್ಯ ಸಂಚಾರ!
Published On :
ಪುದುಚೇರಿ; ರಾತ್ರಿಯ ವೇಳೆಯಲ್ಲಿ ಜನರ ಸುರಕ್ಷತೆಗಾಗಿ ಪೊಲೀಸರು ಗಸ್ತು ತಿರುಗುತ್ತಾರೆ. ಆದರೆ, ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಪುದುಚೇರಿ ಉಪರಾಜ್ಯಪಾಲೆ ಕಿರಣ್ ಬೇಡಿ, ಮಾರುವೇಷದಲ್ಲಿ ತಾವೇ ಸ್ವತಃ ಗಸ್ತು ತಿರುಗುವ ಮೂಲಕ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದ್ದಾರೆ. 
ಚೂಡಿದಾರ ತೊಟ್ಟು, ಮುಖವನ್ನು ದುಪ್ಪಟ್ಟಾದಿಂದ ಮುಚ್ಚಿಕೊಂಡು, ದ್ವಿಚಕ್ರ ವಾಹನವೊಂದರ ಹಿಂದೆ ಕುಳಿತು ಮಧ್ಯರಾತ್ರಿಯ ವೇಳೆ ಪುದುಚೇರಿಯ ರಸ್ತೆಗಳನ್ನು ಸುತ್ತಿದ್ದಾರೆ. 
ನಗರ ಸುರಕ್ಷತೆ ಅರಿಯಲು ರಹಸ್ಯ ಬೈಕ್ ನಲ್ಲಿ ರಹಸ್ಯ ಸಂಚಾರ ಮಾಡಿದ ಬಳಿಕ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಿರಣ್ ಬೇಡಿ, ಪುದುಚೇರಿ ಮಹಿಳೆಯರಿಗೆ ಸುರಕ್ಷಿತ ತಾಣವಾಗಿದೆ. ಆದರೆ, ಕೆಲವೊಂದು ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಪೊಲೀಸರಿಗೆ ಸೂಚಿಸಲಿದ್ದೇನೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.