ಕಲಿಕೆ ವೇಳೆ ಮಗುವಿನ ಮೇಲೆ ಮಹಿಳೆಯ ಮೃಗೀಯ ವರ್ತನೆ ಖಂಡಿಸಿದ ಕೊಹ್ಲಿ
ಮಕ್ಕಳನ್ನು ವಿದ್ಯಾವಂತರಾಗಿ ಮಾಡುವುದು ಪ್ರತಿಯೊಬ್ಬ ಪೋಷಕರ ಕೆಲಸವಾಗಿರುತ್ತದೆ. ಆದರೆ ಕಲಿಕೆ ಹೆಸರಲ್ಲಿ ಮುಗ್ಧ ಮಗುವಿನ ಮೇಲೆ ಮೃಗೀಯ ವರ್ತನೆ ತೋರುವುದು ಎಷ್ಟು ಸರಿ...

Published On :
ಮಕ್ಕಳನ್ನು ವಿದ್ಯಾವಂತರಾಗಿ ಮಾಡುವುದು ಪ್ರತಿಯೊಬ್ಬ ಪೋಷಕರ ಕೆಲಸವಾಗಿರುತ್ತದೆ. ಆದರೆ ಕಲಿಕೆ ಹೆಸರಲ್ಲಿ ಮುಗ್ಧ ಮಗುವಿನ ಮೇಲೆ ಮೃಗೀಯ ವರ್ತನೆ ತೋರುವುದು ಎಷ್ಟು ಸರಿ. ಇಂತಹದೊಂದು ಮನಕಲುಕುವ ವಿಡಿಯೊಂದನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.
ಮಹಿಳೆಯ ಮೃಗೀಯ ವರ್ತನೆಗೆ ಬೇಸರ ವ್ಯಕ್ತಪಡಿಸಿರುವ ವಿರಾಟ್ ಕೊಹ್ಲಿ, ಮಕ್ಕಳಿಗೆ ಓದು ಬರಹ ಕಲಿಸುವ ವೇಳೆ ಪ್ರೀತಿ, ವಿಶ್ವಾಸದಿಂದ ಕಲಿಸಬೇಕೇ ಹೊರತು ಹೊಡೆದು ಬಡಿದು ಅಲ್ಲ. ಪುಟ್ಟ ಕಂದ ಅಳುತ್ತಾ ಮಗ್ಗಿಯನ್ನು ಹೇಳುತ್ತಿರುವುದು ನಿಜಕ್ಕೂ ಮನಕಲಕುವಂತಿದೆ ಎಂದು ಬರೆದಿದ್ದಾರೆ.
ಇನ್ನು ಈ ಕುರಿತು ಬಾಲಿವುಡ್ ನಟ ಅರ್ಜುನ್ ರಾಮ್ ಪಾಲ್ ಮತ್ತು ನಟಿ ದಿಯಾ ಮಿರ್ಜಾ ಸಹ ವಿಷಾಧ ವ್ಯಕ್ತಪಡಿಸಿದ್ದಾರೆ. ನಟಿ ದಿಯಾ ಮಿರ್ಜಾ ಈ ಘಟನೆ ನಿಜಕ್ಕೂ ನೋವು ತಂದಿದೆ. ಭಯದಿಂದ ಯಾವುದನ್ನು ಕಲಿಯಲು ಸಾಧ್ಯವಿಲ್ಲ. ಭಯದ ಮೂಲಕ ಏನನ್ನು ಕಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


