'ವಂದೇ ಮಾತರಂ' ಹೇರಿಕೆ ಬದಲು ಯುವಕರನ್ನು ಪ್ರೇರೇಪಿಸಿ: ನೇತಾಜಿ ಮೊಮ್ಮಗ ಸಿ.ಕೆ. ಬೋಸ್
'ವಂದೇ ಮಾತರಂ' ಹೇರಿಕೆ ಮಾಡುವ ಬದಲು ಯುವಕರೇ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕೆಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ...

Published On :
ಕೋಲ್ಕತಾ: 'ವಂದೇ ಮಾತರಂ' ಹೇರಿಕೆ ಮಾಡುವ ಬದಲು ಯುವಕರೇ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕೆಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಬೋಸ್ ಅವರು ಬುಧವಾರ ಹೇಳಿದ್ದಾರೆ.
ನಿನ್ನೆಯಷ್ಟೇ ವಂದೇ ಮಾತರಂ ವಿವಾದ ಸಂಬಂಧ ಹೇಳಿಕೆ ನೀಡಿದ್ದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯವರು, ರಾಷ್ಟ್ರೀಯತೆ ಎಂಬುದು ಕೇವಲ ಜನವರಿ 26 ಮತ್ತು ಆಗಸ್ಟ್ 15ರ ಸಂಭ್ರಮಕ್ಕೆ ಮಾತ್ರವೇ ಸೀಮಿತವಾಗಿರಬಾರದು. ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಹೀಗಾಗಿ 'ವಂದೇ ಮಾತರಂ'ನ್ನು ಕಡ್ಡಾಯಗೊಳಿಸಲು ಕಾನೂನನ್ನು ಜಾರಿಗೆ ತರಬೇಕೆಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿ.ಕೆ. ಬೋಸ್ ಅವರು, ಶಿಸ್ತನ್ನು ಪಾಲನೆ ಮಾಡಬೇಕು. ಆದರೆ, ಪ್ರಜಾಪ್ರಭುತ್ವದಲ್ಲಿ ಆಳ್ವಿಕೆ ಕೆಲಸ ಮಾಡುವುದಿಲ್ಲ. ಭಾರತ ಒಂದು ದೇಶವಾಗಿದ್ದು, ಇಲ್ಲಾ ಎಲ್ಲಾ ರೀತಿಯ ಧರ್ಮಗಳನ್ನು ಹೊಂದಿದ್ದೇವೆ. ಪ್ರತ್ಯೇಕ ವಿಭಾಗಗಳ ಜನರು ಇಲ್ಲಿ ನೆಲೆಯೂರಿರುವುದರಿಂದ ಯಾರ ಮೇಲೂ, ಏನನ್ನೂ ಹೇರಿಕೆ ಮಾಡಬಾರದು. ವಂದೇ ಮಾತರಂ, ಜನಗಣಮನ ಅಥವಾ ಜೈ ಹಿಂದ್ ಗಳನ್ನು ಅವರೇ ಅಳವಡಿಸಿಕೊಳ್ಳಲು ಯುವಕರನ್ನು ಪ್ರೇರೇಪಿಸಬೇಕು ಎಂದು ಹೇಳಿದ್ದಾರೆ.
ದೇಶದ ಯುವಕರಲ್ಲಿ ರಾಷ್ಟ್ರಭಕ್ತಿ, ರಾಷ್ಟ್ರೀಯತೆ ಹಾಗೂ ರಾಷ್ಟ್ರ ಕುರಿತ ಪ್ರೇಮದಲ್ಲಿ ಕೊರತೆ ಎದ್ದು ಕಾಣುತ್ತಿದೆ. ನಾಯಕರಾಗಿ ನಾವು ಯುವಕರಲ್ಲಿ ದೇಶ ಭಕ್ತಿಯನ್ನು ಹೆಚ್ಚಿಸುವ ಕೆಲವನ್ನು ಮಾಡಬೇಕು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


