ಜಾರ್ಖಂಡ್: ವ್ಯಕ್ತಿಯೊಬ್ಬರ ನಿವಾಸದ ಕರೆಂಟ್ ಬಿಲ್ ಬರೋಬ್ಬರಿ 38 ಬಿಲಿಯನ್!
ಇಲ್ಲಿನ ನಿವಾಸಿಯೊಬ್ಬರು ತಮ್ಮ ಮನೆಯ ಕರೆಂಟ್ ಬಿಲ್ ನೋಡಿ ಹೌಹಾರಿದ್ದಾರೆ. 3 ಬೆಡ್ ರೂಂ ಮನೆಯ ಬಿಲ್ ಬರೋಬ್ಬರಿ ರು. 38 ಬಿಲಿಯನ್ ...

Published On :
ಜೆಮ್ ಶೆಡ್ಪುರ: ಇಲ್ಲಿನ ನಿವಾಸಿಯೊಬ್ಬರು ತಮ್ಮ ಮನೆಯ ಕರೆಂಟ್ ಬಿಲ್ ನೋಡಿ ಹೌಹಾರಿದ್ದಾರೆ. 3 ಬೆಡ್ ರೂಂ ಮನೆಯ ಬಿಲ್ ಬರೋಬ್ಬರಿ ರು. 38 ಬಿಲಿಯನ್ ಬಂದಿದೆ.
ಬಿ.ಆರ್. ಗುಹಾ ಎಂಬಾತನಿಗೆ ಜಾರ್ಖಂಡ್ ವಿದ್ಯುತ್ ಮಂಡಳಿಯಿಂದ 38 ಬಿಲಿಯನ್ ಮೊತ್ತದ ಬಿಲ್ ಬಂದಿದೆ. ಅಷ್ಟೇ ಅಲ್ಲ ಕರೆಂಟ್ ಬಿಲ್ ಕಟ್ಟಿಲ್ಲ ಅನ್ನೋ ಕಾರಣಕ್ಕೆ ಆತನ ಮನೆಯ ವಿದ್ಯುತ್ ಸಂಪರ್ಕವನ್ನು ಕೂಡ ಸ್ಥಗಿತಗೊಳಿಸಲಾಗಿದೆ.
ಗುಹಾ ಅವರದ್ದು ಮೂರು ಕೊಠಡಿಗಳ ಪುಟ್ಟ ಮನೆ. ಮೂರು ಫ್ಯಾನ್, ಮೂರು ಟ್ಯೂಬ್ ಲೈಟ್ ಮತ್ತು ಟಿವಿ ಚಾಲನೆಯಲ್ಲಿರುತ್ತದೆ.
ಇಷ್ಟಕ್ಕೆ 38 ಬಿಲಿಯನ್ ಬಿಲ್ ಬರಲು ಹೇಗೆ ಸಾಧ್ಯ ಅನ್ನೋದು ಅವರ ಪ್ರಶ್ನೆಯಾಗಿದೆ. ಗುಹಾಗೆ ಬಿಪಿಯಿದ್ದು ಆತನ ಪತ್ನಿ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದಾರೆ.
ಭಾರೀ ಮೊತ್ತದ ಕರೆಂಟ್ ಬಿಲ್ ನೋಡಿ ಇಬ್ಬರೂ ಗಾಬರಿಯಾಗಿದ್ದಾರೆ, ಏನಾದ್ರೂ ಅನಾಹುತವಾದರೇ ಏನು ಗತಿ ಎಂದು ಅವರ ಪುತ್ರಿ ಅಳಲು ತೋಡಿಕೊಂಡಿದ್ದಾರೆ. ನೆರೆಹೊರೆಯವರ ಸಹಾಯದಿಂದ ಈ ಬಗ್ಗೆ ದೂರು ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
JamshedpurCurrent BillRs. 38 billionJharkhand Electricity Boardಜೆಮ್ ಶೆಡ್ಪುರಕರೆಂಟ್ ಬಿಲ್ರು. 38 ಬಿಲಿಯನ್ಜಾರ್ಖಂಡ್ ವಿದ್ಯುತ್ ಮಂಡಳಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


