ರಕ್ಷಾ ಬಂಧನ: ಪ್ರಧಾನಿ ಮೋದಿಗೆ ರಾಖಿ ಕಟ್ಟಿದ ಬೃಂದಾವನ ವಿಧವೆಯರು, ವಿದ್ಯಾರ್ಥಿಗಳು
ದೇಶದಾದ್ಯಂತ ಭಾತೃತ್ವದ ಬಂಧನವನ್ನು ಸಾರುವ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತಿದ್ದು, ಕಳೆದ ವರ್ಷದಂತೆಯೇ ಈ ಬಾರಿಯೂ ಕೂಡ ಬೃಂದಾವನ ಮತ್ತು ವಾರಣಾಸಿಯ ವೃದ್ಧ ವಿಧವೆಯರು ಹಾಗೂ ವಿದ್ಯಾರ್ಥಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಾವೇ...

Published On :
ನವದೆಹಲಿ: ದೇಶದಾದ್ಯಂತ ಭಾತೃತ್ವದ ಬಂಧನವನ್ನು ಸಾರುವ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತಿದ್ದು, ಕಳೆದ ವರ್ಷದಂತೆಯೇ ಈ ಬಾರಿಯೂ ಕೂಡ ಬೃಂದಾವನ ಮತ್ತು ವಾರಣಾಸಿಯ ವೃದ್ಧ ವಿಧವೆಯರು ಹಾಗೂ ವಿದ್ಯಾರ್ಥಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಾವೇ ಸ್ವತಃ ಸಿದ್ಧಪಡಿಸಿದ ರಾಖಿಗಳನ್ನು ಕಟ್ಟಿದ್ದಾರೆ.
ದೆಹಲಿಯ ಲೋಕ ಕಲ್ಯಾಣ್ ಮಾರ್ಗ್ ನಲ್ಲಿರುವ ಪ್ರಧಾನಿ ಮೋದಿಯವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿರುವ ವಿಧವೆಯರು, ಪ್ರಧಾನಿ ಮೋದಿಯವರಿಕೆ ರಾಖಿ ಕಟ್ಟುವ ಮೂಲಕ ಸಂಸತ ವ್ಯಕ್ತಪಡಿಸಿದ್ದಾರೆ.
ಮೋದಿಯವರಿಗೆ ರಾಖಇ ಕಟ್ಟಿದ ಬಳಿಕ ಪ್ರತಿಕ್ರಿಯೆ ನೀಡಿರುವ ವೃದ್ಧ ವಿಧವೆಯೊಬ್ಬರು, ಮನೆಯಲ್ಲಿಯೇ ತಯಾರಿಸಿದ್ದ ರಾಖಿಯನ್ನು ಮೋದಿಯವರಿಗೆ ಕಟ್ಟಿಲಾಯಿತು. ಬಳಿಕ ಬೃಂದಾವನಕ್ಕೆ ಭೇಟಿ ನೀಡುವಂತೆ ಮೋದಿಯರಿಗೆ ಆಹ್ವಾನ ನೀಡಿದ್ದೇವೆ. ಆಶೀರ್ವಾದವನ್ನೂ ಮಾಡಿದ್ದೇವೆ. ಮೋದಿಯವರೊಂದಿಗೆ ಹಬ್ಬವನ್ನು ಆಚರಿಸುವುದರಿಂದ ಬಹಳ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
ದೇಶದ ಅಭಿವೃದ್ಧಿಗಾಗಿ ಅವರ ಶ್ರಮ ಹಾಗೂ ಕೊಡುಗೆ, ಭಾರತೀಯ ಮಹಿಳೆಯರ ಮೇಲೆ ಅವರಿಗಿರುವ ಗೌರವವನ್ನು ಮೆಚ್ಚಲೇಬೇಕು. ಉತ್ತಮ ದೇಶಕ್ಕಾಗಿ ಮೋದಿಯವರಿಗೆ ಸದಾಕಾಲ ನಾವು ಬೆಂಬಲ ನೀಡುತ್ತೇವೆಂದು ತಿಳಿಸಿದ್ದಾರೆ
ಇದರೊಂದಿಗೆ ಕೆಲ ಶಾಲಾ ವಿದ್ಯಾರ್ಥಿಗಳೂ ಕೂಡ ತಾವೇ ರಾಖಿಗಳನ್ನು ತಯಾರಿಸಿ ಮೋದಿಯವರಿಗೆ ಕೈಗೆ ಕಟ್ಟಿದ್ದಾರೆ.
ಇನ್ನು ರಾಜಧಾನಿ ದೆಹಲಿಯಲ್ಲಿ ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೂ ಕೂಡ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದು, ರಾಷ್ಟ್ರಪತಿ ಭವನಕ್ಕೆ ಬಂದ ಶಾಲಾ ಮಕ್ಕಳು ರಾಮನಾಥ್ ಕೋವಿಂದ್ ಅವರಿಗೆ ರಾಖಿಗಳನ್ನು ಕಟ್ಟಿದ್ದಾರೆ, ಈ ಮೂಲಕ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ರಕ್ಷಾಬಂಧನ ಹಬ್ಬವನ್ನು ಆಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


