ದೇಶ

ಡಿಫೆನ್ಸ್ ಎಕ್ಸ್ಪೋ-2018 ಆಯೋಜನೆಗೆ ಗೋವಾ ಸಿದ್ಧಗೊಂಡಿದೆ: ಮನೋಹರ್ ಪರಿಕ್ಕರ್

ಮುಂದಿನ ವರ್ಷದ ಡಿಫೆನ್ಸ್ ಎಕ್ಸ್ಪೋ ಆಯೋಜನೆಗೆ ಗೋವಾ ಸರ್ಕಾರ ಸಿದ್ಧಗೊಂಡಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ಡಿಫೆನ್ಸ್ ಎಕ್ಸ್ಪೋ-2018 ಆಯೋಜನೆಗೆ ಗೋವಾ ಸಿದ್ಧಗೊಂಡಿದೆ: ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್
Published On :
ಪಣಜಿ: ಮುಂದಿನ ವರ್ಷದ ಡಿಫೆನ್ಸ್ ಎಕ್ಸ್ಪೋ ಆಯೋಜನೆಗೆ ಗೋವಾ ಸರ್ಕಾರ ಸಿದ್ಧಗೊಂಡಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ. 
ರಕ್ಷಣಾ ಸಚಿವಾಲಯ ದ್ವೈವಾರ್ಷಿಕವಾಗಿ ಆಯೋಜಿಸುವ ಡಿಫೆನ್ಸ್ ಎಕ್ಸ್ಪೋ ಕಾರ್ಯಕ್ರಮವನ್ನು ಕಳೆದ ವರ್ಷ ಗೋವಾದ ನಾಕ್ವೆರಿ-ಕ್ವಿಟೋಲ್ ನಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಡಿಫೆನ್ಸ್ ಎಕ್ಸ್ಪೋ ಕಾರ್ಯಕ್ರಮ ಆಯೋಜಿಸಲು ಗೋವಾ ಸರ್ಕಾರ ಸಿದ್ಧಗೊಂಡಿದೆ ಎಂದು ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರಾದರೂ ನಾಕ್ವೆರಿ-ಕ್ವಿಟೋಲ್ ದಲ್ಲಿ ಎಕ್ಸ್ಪೋ ಆಯೋಜನೆಗೊಳ್ಳಲಿರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. 
ಡಿಫೆನ್ಸ್ ಎಕ್ಸ್ಫೋ 2018 ಗೋವಾದಲ್ಲಿ ನಡೆಯಲಿದೆ ಎಂಬುದಷ್ಟೇ ತೀರ್ಮಾನವಾಗಿದೆ ಎಂದಷ್ಟೇ ಪರಿಕ್ಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಡಿಫೆನ್ಸ್ ಎಕ್ಸ್ಫೋ ಕಾರ್ಯಕ್ರಮದಲ್ಲಿ ರಕ್ಷಣಾ ಉತ್ಪನ್ನಗಳು ಪ್ರದರ್ಶನಗೊಳ್ಳಲಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.