ಯುದ್ಧಕ್ಕೆ ಭಾರತ ಸಿದ್ಧವಾಗಿದೆ: ಪಾಕ್ ಸೇನಾ ಮುಖ್ಯಸ್ಥರಿಗೆ ಸ್ವಾಮಿ ಎಚ್ಚರಿಕೆ
ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ್ದೇ ಆದರೆ, ಯುದ್ಧ ಮಾಡಲು ಭಾರತ ಸಿದ್ಧವಾಗಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಕ್ವಾಮರ್ ಜಾವೇದ್ ಜಾಜ್ವಾ ಅವರಿಗೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಸೋಮವಾರ ಎಚ್ಚರಿಕೆ...

Published On :
ನವದೆಹಲಿ: ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ್ದೇ ಆದರೆ, ಯುದ್ಧ ಮಾಡಲು ಭಾರತ ಸಿದ್ಧವಾಗಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಖ್ವಾಮರ್ ಜಾವೇದ್ ಜಾಜ್ವಾ ಅವರಿಗೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಕಾಶ್ಮೀರ ವಿವಾದ ಸಂಬಂಧ ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖ್ವಾಮರ್ ಜಾವೇದ್ ಬಾಜ್ವಾ ಅವರು ಹೇಳಿಕೆಯೊಂದನ್ನು ನೀಡಿದ್ದರು. ಕಾಶ್ಮೀರಿಗರ ಹಕ್ಕಿಗಾಗಿ ಹಾಗೂ ಆತ್ಮ ಸಂಕಲ್ಪಕ್ಕಾಗಿ ರಾಜಕೀಯ ಅತಂತ್ರಕ್ಕೆ ನಮ್ಮ ಬೆಂಬಲವನ್ನು ನಾವು ಮುಂದುವರೆಸುತ್ತೇವೆ. ಕಾಶ್ಮೀರದಲ್ಲಿನ ಭಯೋತ್ಪಾದನೆಗೆ ಭಾರತ ಪ್ರಾಯೋಜಿಸುತ್ತಿದೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸ್ವಾಮಿ ಅವರು, ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಮೂಗು ತೂರಿಸುವ ಪ್ರಯತ್ನ ಮಾಡಿ ನೋಡಲಿ. ಎಲ್ಲದ್ದಕೂ ನಾವು ಸಿದ್ಧರಾಗಿದ್ದೇವೆ. ಪಾಕಿಸ್ತಾನದ ವರ್ತನೆಗೆ ದಿಟ್ಟ ಉತ್ತರ ನೀಡಲು ನಾವು ಸಿದ್ಧರಿದ್ದೇವೆ. ಪಾಕಿಸ್ತಾನವನ್ನು ಅಂತ್ಯ ಕಾಣುವಂತೆ ಮಾಡುತ್ತೇವೆ. ಪಾಕಿಸ್ತಾನವನ್ನು ನೆಲೆಕಚ್ಚುವಂತೆ ಮಾಡಲು ಪ್ರತೀಯೊಬ್ಬ ಭಾರತೀಯನೂ ಕಾಯುತ್ತಿದ್ದಾನೆ. ಪಾಕಿಸ್ತಾನ ಪ್ರಯತ್ನ ಮಾಡಿ ನೋಡಲಿ ಎಂದು ಎಛ್ಚರಿಸಿದ್ದಾರೆ.
ಇಸ್ಲಾಮಾದ್ ಕಾಶ್ಮೀರ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಪ್ರಯತ್ನ ಮಾಡುತ್ತಿದೆ ಎಂಬುದು ವಿಷಯವಲ್ಲ. ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕ ಮಾಡುವಲ್ಲಿ ಪಾಕಿಸ್ತಾನ ಎಂದಿಗೂ ಯಶಸ್ಸಾಗಲು ಸಾಧ್ಯವಿಲ್ಲ. ಭಾರತದೊಂದಿಗೆ ನಾಲ್ಕು ಯುದ್ಧದಲ್ಲಿ ಪಾಕಿಸ್ತಾನ ಸೋಲು ಕಂಡಿದೆ. ಅವರ ಹೇಳಿಕೆಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅವರ ದೇಶದಲ್ಲಿ ಸರ್ಕಾರವೇ ಇಲ್ಲ ಎಂಬುದು ನಮಗೆ ಗೊತ್ತಿದೆ. ಅವರಿಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಯಾವುದೇ ಪರಿಸ್ಥಿತಿಗೂ ನಾವು ಸಿದ್ಧರಿದ್ದು, ಆ ಸಮಯಕ್ಕಾಗಿ ನಾವು ಕಾಯುತ್ತಿದ್ದೇವೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


