ಎಡರಂಗದ ವಿದ್ಯಾರ್ಥಿಗಳನ್ನು ಖಂಡಿಸಿದ ಜೆಎನ್ ಯು ಶಿಕ್ಷಕರು
ಛತ್ತೀಸ್ ಗಢದ ಸುಕ್ಮಾದಲ್ಲಿ ಮಾವೋವಾದಿಗಳ ದಾಳಿಯಲ್ಲಿ ಹುತಾತ್ಮರಾದ 25 ಸಿಆರ್ ಪಿಎಫ್ ಯೋಧರ ಸ್ಮರಣಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರ ಕಾರ್ ಗಾಜನ್ನು ಒಡೆಯಲಾಗಿದೆ.

Published On :
ನವದೆಹಲಿ: ಛತ್ತೀಸ್ ಗಢದ ಸುಕ್ಮಾದಲ್ಲಿ ಮಾವೋವಾದಿಗಳ ದಾಳಿಯಲ್ಲಿ ಹುತಾತ್ಮರಾದ 25 ಸಿಆರ್ ಪಿಎಫ್ ಯೋಧರ ಸ್ಮರಣಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರ ಕಾರ್ ಗಾಜನ್ನು ಒಡೆಯಲಾಗಿದೆ.
ಕಾರಿನ ಗಾಜನ್ನು ಪುಡಿ ಮಾಡಿರುವ ಕೃತ್ಯವನ್ನು ಜೆಎನ್ ಯು ಶಿಕ್ಷಕರು ಖಂಡಿಸಿದ್ದು, ಘಟನೆಯ ಬಗ್ಗೆ ಈ ವರೆಗೂ ಪ್ರತಿಕ್ರಿಯೆ ನೀಡದ ಜೆಎನ್ ಯು ಟೀಚರ್ಸ್ ಅಸೋಸಿಯೇಷನ್ ನ ಕ್ರಮವನ್ನು ಸಹ ಖಂಡಿಸಿದ್ದಾರೆ. "ಘಟನೆಗೆ ಸಂಬಂಧಿಸಿದಂತೆ ನಾವು ಯಾರ ಹೆಸರನ್ನೂ ಪ್ರಸ್ತಾಪಿಸುತ್ತಿಲ್ಲ. ಆದರೆ ಎಡಪಂಥೀಯ ಸದಸ್ಯರೇ ಈ ಕೆಲಸವನ್ನು ಮಾಡಿದ್ದಾರೆ ಎಂಬುದು ಸ್ಪಷ್ಟ. ಏಕೆಂದರೆ ಕಾರ್ಯಕ್ರಮ ಆಯೋಜನೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ವಿರೋಧ ವ್ಯಕ್ತಪಡಿಸಿದ್ದರ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದನ್ನೂ ಸಹ ಎಡಪಂಥೀಯ ಸದಸ್ಯರು ವಿರೋಧಿಸಿದ್ದರು ಎಂದು ಸಹಾಯಕ ಪ್ರೊಫೆಸರ್ ಬುದ್ಧ ಸಿಂಗ್ ಹೇಳಿದ್ದಾರೆ.
ಮೆಮೋರಿಯಲ್ ಮೀಟಿಂಗ್ ನಲ್ಲಿ ಭಾಗವಹಿಸಿ ಬಂದ ಮರುದಿನ ಬೆಳಿಗ್ಗೆ ಅಂದರೆ ಏ.30 ರಂದು ಸಹಾಯಕ ಪ್ರೊಫೆಸರ್ ಬುದ್ಧ ಸಿಂಗ್ ಅವರ ಕಾರಿನ ಗಾಜನ್ನು ಪಡೆಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರೊ.ಸಿಂಗ್ ಎಡಪಕ್ಷಗಳಿಗೆ ಸಂಬಂಧಿಸಿದ ಸಂಘಟನೆಯ ವಿದ್ಯಾರ್ಥಿಗಳು ಕಾಶ್ಮೀರಕ್ಕಾಗಿ ಆಜಾದಿ ಕೂಗುವವರ ಹಿಂದೆ ಹೋಗುತ್ತಾರೆ. ಆದರೆ ನಮ್ಮ ದೇಶದ ಯೋಧರ ಬಲಿದಾನವನ್ನು ಸ್ಮರಿಸುವ ಕಾರ್ಯಕ್ರಮದಿಂದ ಗೈರಾಗಿ ವಿರೋಧಿಸುತ್ತಾರೆ ಇದೊಂದು ವಿಚಿತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


