ಕಾರು ಅಪಘಾತ: ನಟಿ-ರೂಪದರ್ಶಿ ಸೋನಿಕಾ ಚೌಹಾಣ್ ಸಾವು, ನಟ ವಿಕ್ರಮ್ ಗೆ ಗಾಯ
ಕೊಲ್ಕತಾ ಮೂಲದ ನಟಿ ಹಾಗೂ ರೂಪದರ್ಶಿ ಸೋನಿಕಾ ಚೌಹಾಣ್ ಅವರು ಶನಿವಾರ ಬೆಳಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ...

Published On :
ಕೊಲ್ಕಾತಾ: ಕೊಲ್ಕತಾ ಮೂಲದ ನಟಿ ಹಾಗೂ ರೂಪದರ್ಶಿ ಸೋನಿಕಾ ಚೌಹಾಣ್ ಅವರು ಶನಿವಾರ ಬೆಳಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು, ನಟ ವಿಕ್ರಮ್ ಚಟರ್ಜಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ ರಾಶ್ ಬೆಹಾರಿ ಬಳಿ ಕಾರು ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸೋನಿಕಾ ಹಾಗೂ ಅವರ ಸ್ನೇಹಿತ ವಿಕ್ರಮ್ ಚಟರ್ಜಿ ಅವರನ್ನು ಕೂಡಲೇ ಆಸ್ಪತ್ರೆದೆ ದಾಖಲಿಸಲಾಗಿದೆ. ಆದರೆ ಸೋನಿಯಾ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸೋನಿಕಾ ಮತ್ತು ವಿಕ್ರಮ್ ಪ್ರಯಾಣಿಸುತ್ತಿದ್ದ ಟೋಯೊಟಾ ಕೊರೊಲಾ ಕಾರ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದಿದ್ದು, ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ.
ಗಾಯಗೊಂಡಿದ್ದ ನಟ ವಿಕ್ರಮ್ ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೊಲ್ಕತ್ತಾ ಮೂಲದವರಾದ ಸೋನಿಕಾ ಅವರು ಕೆಲವು ಚಾನೆಲ್‌ಗಳಲ್ಲಿ ಪ್ರೈಮ್ ಟೈಮ್ ಶೋ ನಡೆಸಿಕೊಡುತ್ತಿದ್ದರು.
ನಟ ವಿಕ್ರಮ್ ಅವರ ‘ಖೋಜ್’ ಸಿನಿಮಾ ಹಲವು ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ‘ಎಲರ್ ಛಾರ್ ಅಧ್ಯಾಯ್’ ಹಾಗೂ ‘ಅಮಿ ಅರ್ ಅಮರ್ ಗರ್ಲ್‌ಫ್ರೆಂಡ್ಸ್’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


