ದೇಶ

ಪ್ರಧಾನಿ ಮೋದಿ ಮದುವೆಯಾದರು, ಆದರೆ ಗೃಹಸ್ಥರಾಗಲಿಲ್ಲ: ಬಿಜೆಪಿ ಸಂಸದೆ

ಪ್ರಧಾನಮಂತ್ರಿ ನರಂದ್ರ ಮೋದಿಯವರು ವಿವಾಹವಾದರೂ, ಆದರೆ, ಎಂದಿಗೂ ಗೃಹಸ್ಥರಾಗಲಿಲ್ಲ ಎಂಬ ಬಿಜೆಪಿ ಸಂಸದೆಯೊಬ್ಬರ ಹೇಳಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ...

ಪ್ರಧಾನಿ ಮೋದಿ ಮದುವೆಯಾದರು, ಆದರೆ ಗೃಹಸ್ಥರಾಗಲಿಲ್ಲ: ಬಿಜೆಪಿ ಸಂಸದೆ
ಪ್ರಧಾನಮಂತ್ರಿ ನರಂದ್ರ ಮೋದಿ
Published On :
ಭೂಪಾಲ್: ಪ್ರಧಾನಮಂತ್ರಿ ನರಂದ್ರ ಮೋದಿಯವರು ವಿವಾಹವಾದರೂ, ಆದರೆ, ಎಂದಿಗೂ ಗೃಹಸ್ಥರಾಗಲಿಲ್ಲ ಎಂಬ ಬಿಜೆಪಿ ಸಂಸದೆಯೊಬ್ಬರ ಹೇಳಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶಬಿಜೆಪಿ ಸಂಸದೆ ಜ್ಯೋತಿ ಧುರ್ವೆಯವರು ಈ ರೀತಿಯ ಹೇಳಿಕೆಯೊಂದನ್ನು ನೀಡಿದ್ದು, ಬಿಜೆಪಿ ಸಂಸದೆಯ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಹಲವರು ಬಿಜೆಪಿ ಸಂಸದೆ ವಿರುದ್ಧ ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 
ಬೆತುಲ್ ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಮಾಡುವ ಪ್ರಸ್ತಾವನೆ ಕುರಿತಂತೆ ಚರ್ಚೆಯೊಂದು ನಡೆಯುತ್ತಿತ್ತು. ಈ ವೇಳೆ ಜ್ಯೋತಿ ಧುರ್ವೆಯನ್ನು ಪತ್ರಕರ್ತರೊಬ್ಬರು ಸಂಪರ್ಕಿಸಿ ಪ್ರತಿಕ್ರಿಯೆಯನ್ನು ಕೇಳಿದ್ದಾರೆ. 
ಈ ವೇಳೆ ಮಾತನಾಡಿರುವ ಜ್ಯೋತಿಯವರು ಜನರೊಂದಿಗೆ ಸಂಪರ್ಕದಲ್ಲಿರುವಂತೆ ಪ್ರಧಾನಮಂತ್ರಿಗಳು ಹೇಳಿದ್ದಾರೆ. ಸಾರ್ವಜನಿಕರ ಹಣವನ್ನು ಖರ್ಚು ಮಾಡಬೇಕು, ಆದರೆ, ಪ್ರಧಾನಮಂತ್ರಿಗಳ ನಿಧಿಯಿಂದಲ್ಲ. ಮೋದಿಯವರು ಮದುವೆಯಾಗಿದ್ದಾರೆ, ಆದರೆ, ಅವರು ಎಂದಿಗೂ ಗೃಹಸ್ಥರಾಗಲಿಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಲು ಜ್ಯೋತಿ ಧುರ್ವೆಯವರು ಸಂಪರ್ಕಕ್ಕೆ ಸಿಕ್ಕಿಲ್ಲ. 
ಜ್ಯೋತಿ ಧುರ್ವೆಯವರ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖ್ಯ ವಕ್ತಾರ ದೀಪಕ್ ವಿಜಯವರ್ಗೀಯ ಅವರು, ಜ್ಯೋತಿಯವರು ಪ್ರಧಾನಮಂತ್ರಿಗಳ ವಿರುದ್ಧ ಎಲ್ಲಿಯೂ ಮಾತನಾಡಿಲ್ಲ. ಅಭಿವೃದ್ಧಿ ಬಗ್ಗೆಯಷ್ಟೇ ಅವರು ಮಾತನಾಡಿದ್ದಾರೆಂದು ಸ್ಪಷ್ಟನೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.