ಅಣೆಕಟ್ಟೆ ನೀರು ಆವಿಯಾಗುವುದನ್ನು ತಡೆಗಟ್ಟಲು ತಮಿಳುನಾಡು ಸಚಿವರ ಸಖತ್ ಐಡಿಯಾ!
ತಮಿಳುನಾಡು ಸರ್ಕಾರದ ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಥರ್ಮಾಕೋಲ್ ನ್ನು ಬಳಕೆ ಮಾಡಿ ನೀರು ಆವಿಯಾಗುವ ಸಮಸ್ಯೆಯನ್ನು ತಡೆಯುವ ವಿಧಾನವನ್ನು ಕಂಡುಕೊಂಡಿದ್ದಾರೆ.

Published On :
ಮಧುರೈ: ನೀರಿಗೆ ಹಾಹಾಕಾರ ಎದುರಾಗುತ್ತಿದ್ದು, ಜೀವ ಜಲದ ರಕ್ಷಣೆಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಆದರೆ ಕೆರೆ ನೀರು ಆವಿಯಾಗುವುದನ್ನು ತಡೆಗಟ್ಟಲು ತಮಿಳುನಾಡಿನ ಈ ಸಚಿವನಿಗೆ ಹೊಳೆದಷ್ಟು ಅದ್ಭುತವಾದ ಐಡಿಯಾ ಬಹುಶಃ ವಿಶ್ವವಿಖ್ಯಾತ ವಿಜ್ಞಾನಿಗಳಿಂದ ಶಾಲೆ ವಿದ್ಯಾರ್ಥಿಗಳವರೆಗೂ ಯಾರಿಗೂ ಹೊಳೆದಿರಲು ಸಾಧ್ಯವಿಲ್ಲ!
ತಮಿಳುನಾಡು ಸರ್ಕಾರದ ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಥರ್ಮಾಕೋಲ್ ನ್ನು ಬಳಕೆ ಮಾಡಿ ನೀರು ಆವಿಯಾಗುವ ಸಮಸ್ಯೆಯನ್ನು ತಡೆಯುವ ವಿಧಾನವನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲದೇ, ವೈಗೈ ಅಣೆಕಟ್ಟೆಯಲ್ಲಿ ಥರ್ಮಾಕೋಲ್ ನ್ನು ಒಂದಕ್ಕೆ ಒಂದನ್ನು ಅಂಟಿಸಿ ನೀರಿನ ಮೇಲ್ಮೈನಲ್ಲಿರಿಸುವ ಸಚಿವರ ವಿನೂತನ ಐಡಿಯಾ ಪ್ರಾಯೋಗಿಕವಾಗಿ ನಡೆದಿದ್ದನ್ನು ರಾಜ್ಯದ ಪ್ರಮುಖ ಮಾಧ್ಯಮಗಳ ವರದಿಗಾರರೂ ಸಹ ಕಣ್ತುಂಬಿಕೊಂಡಿದ್ದಾರೆ.
ತಮ್ಮ ಸಂಶೋಧನೆಯನ್ನು ತೋರಿಸಲೆಂದೇ ಸಚಿವರು ವರದಿಗಾರರನ್ನು ಮಧುರೈ ನಿಂದ 67 ಕಿಮೀ ದೂರ ಕರೆದುಕೊಂಡು ಹೋಗಿದ್ದರು. ಎರಡು ಥರ್ಮಾಕೋಲ್ ನ್ನು ಅಂಟಿಸಿ ಅದನ್ನು ನೀರಿನ ಮೇಲಿಟ್ಟ ತಕ್ಷಣವೇ ಗಾಳಿಗೆ ತೂರಿ ಹೋಗುತ್ತಿತ್ತು. ಇನ್ನೂ ಕೆಲವು ಮುರಿದು ಹೋಗುತ್ತಿದ್ದವು. ಕೊನೆಗೆ ಏನೆಂದರೂ ಸಹ ಥರ್ಮಾಕೋಲ್ ಪ್ರಯೋಗ ಯಶಸ್ವಿಯಾಗಲಿಲ್ಲ.
ಅಚ್ಚರಿಯೆಂದರೆ ತಮಿಳುನಾಡು ಸರ್ಕಾರದ ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಅವರೇ ಹೇಳುವ ಪ್ರಕಾರ ನೀರು ಆವಿಯಾಗುವುದನ್ನು ತಡೆಗಟ್ಟುವ ಪ್ರಯೋಗಾತ್ಮಕ ವಿಧಾನಗಳಿಗಾಗಿಯೇ ತಮಿಳುನಾಡು ಸರ್ಕಾರ 10 ಲಕ್ಷ ರೂಪಾಯಿ ಅನುದಾನ ನೀಡಿದೆಯಂತೆ. ಸರ್ಕಾರದ ಅನುದಾನದಲ್ಲಿ ಯೋಜನೆ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


