ತ್ರಿವಳಿ ತಲಾಖ್ ಅಂತರ್ಧರ್ಮೀಯ ವಿವಾಹವಾಗುವ ಹಿಂದೂ ಮಹಿಳೆಯರಿಗೆ ಅನ್ವಯವಾಗಬಾರದು: ಪಿಐಎಲ್
ಮುಸ್ಲಿಮ್ ಪುರುಷರನ್ನು ವಿವಾಹವಾಗುವ ಹಿಂದೂ ಮಹಿಳೆಯರಿಗೆ ತ್ರಿವಳಿ ತಲಾಖ್ ಅನ್ವಯವಾಗಬಾರದು ಎಂಬ ಆದೇಶ ನೀಡಲು ಮನವಿ ಮಾಡಿ ದೆಹಲಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

Published On :
ನವದೆಹಲಿ: ತ್ರಿವಳಿ ತಲಾಖ್, ಬಹುಪತ್ನಿತ್ವ ಸೇರಿದಂತೆ ಮುಸ್ಲಿಮರ ವೈಯಕ್ತಿಕ ಕಾನೂನಿನ ಅಂಶಗಳು ಮುಸ್ಲಿಮ್ ಪುರುಷರನ್ನು ವಿವಾಹವಾಗುವ ಹಿಂದೂ ಮಹಿಳೆಯರಿಗೆ ಅನ್ವಯವಾಗಬಾರದು ಎಂಬ ಆದೇಶ ನೀಡಲು ಮನವಿ ಮಾಡಿ ದೆಹಲಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ದೆಹಲಿ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿರುವ ಗೀತಾ ಮಿಟ್ಟಲ್ ಅವರು ಪಿಐಎಲ್ ನ ವಿಚಾರಣೆ ನಡೆಸಲಿದ್ದಾರೆ. ಅಡ್ವೊಕೇಟ್ ವಿಜಯ್ ಶುಕ್ಲಾ ಮುಸ್ಲಿಮರನ್ನು ವಿವಾಹವಾಗುವ ಹಿಂದೂ ಮಹಿಳೆಯರಿಗೆ ತ್ರಿವಳಿ ತಲಾಖ್ ಅನ್ವಯವಾಗಬಾರದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ವಿಶೇಷ ವಿವಾಹ ಕಾಯ್ದೆ ಅಥವಾ ಕಡ್ಡಾಯ ವಿವಾಹ ನೋಂದಣಿ ಕಾಯ್ದೆಯಡಿಯಲ್ಲಿ ಅಂತರ್ಧರ್ಮೀಯ ವಿವಾಹಗಳ ನೋಂದಣಿಯನ್ನು ಕಡ್ಡಾಯಗೊಳಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನಿಕ್ಕಾನಾಮ( ವಿವಾಹ ಒಪ್ಪಂದ)ವನ್ನು ಉರ್ದು ಭಾಷೆಯಲ್ಲಿ ಬರೆಯಲಾಗಿದೆ. ಆದರೆ ಹಿಂದೂ ಮಹಿಳೆಯರು ಅದರಲ್ಲಿರುವ ಅಂಶಗಳನ್ನು ತಿಳಿಯುವುದಕ್ಕೆ ವಿಫಲರಾಗುತ್ತಾರೆ. ಮುಸ್ಲಿಂ ಮೌಲ್ವಿಗಳು ಈ ಅಂಶಗಳನ್ನು ಹಿಂದೂ ಮಹಿಳೆಯರಿಗೆ ಅವರ ಮಾತೃಭಾಷೆಯಲ್ಲಿಯೇ ತಿಳಿಯುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪಿಐಎಲ್ ನಲ್ಲಿ ಆಗ್ರಹಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


