ತ್ರಿವಳಿ ಕೊಲೆ ಪ್ರಕರಣ: ಮಾಜಿ ಆರ್‌ಜೆಡಿ ಸಂಸದ ಶಹಾಬುದ್ದೀನ್ ಖುಲಾಸೆ
1989ರ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಸಂಸದ ಮಹಮ್ಮದ್ ಶಹಾಬುದ್ದೀನ್ ರನ್ನು ಸ್ಥಳೀಯ...

Published On :
ಜೆಮ್‌ಶೆಡ್‌ಪುರ(ಜಾರ್ಖಂಡ್): 1989ರ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಸಂಸದ ಮಹಮ್ಮದ್ ಶಹಾಬುದ್ದೀನ್ ರನ್ನು ಸ್ಥಳೀಯ ನ್ಯಾಯಾಲಯ ಖುಲಾಸೆಗೊಳಿಸಿದೆ.
ಕೊಲೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಕಳೆದ ಫೆಬ್ರವರಿ 15ರಂದು ಬಿಹಾರದ ಸಿವಾನ್ ಜೈಲಿನಿಂದ ದೆಹಲಿಯ ತಿಹಾರ್ ತೈಲಿಗೆ ಸ್ಥಳಾಂತರಿಸುವಂತೆ ಆದೇಶ ನೀಡಿತ್ತು.
ಸಿಪಿಐ ನಾಯಕ ಛೋಟೇಲಾಲ್ ಗುಪ್ತ ಅವರನ್ನು ಸಿವಾನ್ ಜಿಲ್ಲೆಯಲ್ಲಿ 1999ರಲ್ಲಿ ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಬುದ್ದೀನ್ ತಪ್ಪಿತಸ್ಥ ಎಂದು ನ್ಯಾಯಾಲಯ ಪರಿಗಣಿಸಿ ಶಹಾಬುದ್ದೀನ್ ಗೆ ಜೀವಾವಧಿ ಕಠಿಣ ಶಿಕ್ಷೆ ನೀಡಿತ್ತು.
ಇನ್ನು ಕಳೆದ ವರ್ಷ 42 ವರ್ಷದ ರಾಜನ್ ರಾಜ್ ಡೇ ಅವರನ್ನು ಕಳೆದ ವರ್ಷ ಗುಂಡಿಟ್ಟು ಹತ್ಯೆ ಪ್ರಕರಣದಲ್ಲೂ ಶಹಾಬುದ್ದೀನ್ ಹೆಸರು ಕೇಳಿಬಂದಿದೆ. ಇದೇ ರೀತಿ 45 ಕ್ರಿಮಿನಲ್ ಪ್ರಕರಣಗಳು ಶಹಾಬುದ್ದೀನ್ ಮೇಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Courtನ್ಯಾಯಾಲಯJamshedpurಖುಲಾಸೆMohammad ShahabuddinAcquitTriple murder caseಜೆಮ್ಶೆಡ್ಪುರಮಹಮ್ಮದ್ ಶಹಾಬುದ್ದೀನ್ತ್ರಿವಳಿ ಕೊಲೆ ಪ್ರಕರಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


