ದೇಶ

ಉತ್ತರ ಪ್ರದೇಶದ ಅಖಿಲೇಶ್ವರ್ ದೇವಾಲಯದ ಆವರಣದಲ್ಲಿ ಕರುವಿನ ತಲೆ: ಪರಿಸ್ಥಿತಿ ಉದ್ವಿಗ್ನ

ಅಲ್ಲಾಹಾಬಾದ್ ನಲ್ಲಿರುವ ಅಖಿಲೇಶ್ವರ ಮಹಾದೋ ದೇವಾಲಯದ ಆವರಣದಲ್ಲಿ ಯಾರೋ ಕಿಡಿಗೇಡಿಗಳು ಕರುವಿನ ತಲೆ ತಂದು ಬಿಸಾಕಿರುವ ಹಿನ್ನೆಲೆಯಲ್ಲಿ ...

ಉತ್ತರ ಪ್ರದೇಶದ ಅಖಿಲೇಶ್ವರ್ ದೇವಾಲಯದ ಆವರಣದಲ್ಲಿ ಕರುವಿನ ತಲೆ: ಪರಿಸ್ಥಿತಿ ಉದ್ವಿಗ್ನ
ಸಾಂದರ್ಭಿಕ ಚಿತ್ರ
Published On :
ಅಲ್ಲಾಹಾಬಾದ್: ಅಲ್ಲಾಹಾಬಾದ್ ನಲ್ಲಿರುವ ಅಖಿಲೇಶ್ವರ ಮಹಾದೋ ದೇವಾಲಯದ ಆವರಣದಲ್ಲಿ ಯಾರೋ ಕಿಡಿಗೇಡಿಗಳು ಕರುವಿನ ತಲೆ ತಂದು ಬಿಸಾಕಿರುವ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ದೇವಾಲಯದ ಪೂಜಾರಿ ಅಖಿಲೇಶ್ ಪಾಂಡೆ ಎಂದಿನಂತೆ ಬೆಳಗ್ಗೆ ದೇವಾಲಯಕ್ಕೆ ಆಗಮಿಸಿದಾಗ. ಅಲ್ಲಿ ಕರುವಿನ ತಲೆ ನೋಡಿದ್ದಾರೆ. ಕೂಡಲೇ ವಿಷಯ ಎಲ್ಲೆಡೆ ಕಾಡ್ಗಿಚ್ಚಿನಂತೆ ಹರಡಿದೆ.
ಸ್ಥಳಕ್ಕೆ ಬಂದ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ದೇವಾಲಯದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ಶಾಲೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.