ಸೂಕ್ತ ಕಾರಣ ನೀಡದೇ ತಲ್ಲಾಖ್ ನೀಡಿದ್ರೆ ಸಮಾಜದಿಂದಲೇ ಬಹಿಷ್ಕಾರ: ಮುಸ್ಲಿಂ ಕಾನೂನು ಮಂಡಳಿ ಎಚ್ಚರಿಕೆ
ತಲ್ಲಾಖ್ ಪದ್ಧತಿಯನ್ನು ಬೇಕಾಬಿಟ್ಟಿ ತಮ್ಮ ಇಚ್ಛೆಗೆ ಅನುಸಾರವಾಗಿ ಬಳಕೆ ಮಾಡುತ್ತಿರುವ ಮುಸ್ಲಿಂ ಗಂಡಂದಿರ ದಬ್ಬಾಳಿಕೆಗೆ ಶೀಘ್ರದಲ್ಲೇ ಬ್ರೇಕ್ ಬೀಳಲಿದ್ದು, ಸೂಕ್ತ ಕಾರಣ ನೀಡದೇ ತಲ್ಲಾಖ್ ನೀಡಿದ್ರೆ ಸಮಾಜದಿಂದಲೇ ಬಹಿಷ್ಕಾರ ಮಾಡುವುದಾಗಿ ಮುಸ್ಲಿಂ ಕಾನೂನು ಮಂಡಳಿ ಎಚ್ಚರಿಕೆ ನೀಡಿದೆ.

ನವದೆಹಲಿ: ತಲ್ಲಾಖ್ ಪದ್ಧತಿಯನ್ನು ಬೇಕಾಬಿಟ್ಟಿ ತಮ್ಮ ಇಚ್ಛೆಗೆ ಅನುಸಾರವಾಗಿ ಬಳಕೆ ಮಾಡುತ್ತಿರುವ ಮುಸ್ಲಿಂ ಗಂಡಂದಿರ ದಬ್ಬಾಳಿಕೆಗೆ ಶೀಘ್ರದಲ್ಲೇ ಬ್ರೇಕ್ ಬೀಳಲಿದ್ದು, ಸೂಕ್ತ ಕಾರಣ ನೀಡದೇ ತಲ್ಲಾಖ್ ನೀಡಿದ್ರೆ ಸಮಾಜದಿಂದಲೇ ಬಹಿಷ್ಕಾರ ಮಾಡುವುದಾಗಿ ಮುಸ್ಲಿಂ ಕಾನೂನು ಮಂಡಳಿ ಎಚ್ಚರಿಕೆ ನೀಡಿದೆ.
ವಿವಾದಿತ ತ್ರಿವಳಿ ತಲ್ಲಾಖ್ ಬಗ್ಗೆ ಸುಪ್ರೀಂ ಕೋರ್ಟ್ ಮಟ್ಟದಲ್ಲಿ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದು, ವಿವಾದಿತ ಪದ್ದತಿಯನ್ನು ನಿಷೇಧಗೊಳಿಸುವಂತೆ ವ್ಯಾಪಕ ಮುಸ್ಲಿಂ ಮಹಿಳಾ ಸಂಘಟನೆಗಳು ಆಗ್ರಹಿಸುತ್ತಿವೆ. ಈ ಹಿಂದಿನ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ತ್ರಿವಳಿ ತಲ್ಲಾಖ್ ನಿಷೇಧ ಕುರಿತು ಸಮಯಾವಕಾಶ ಕೇಳಿದ್ದ ಮುಸ್ಲಿಂ ಕಾನೂನು ಮಂಡಳಿ ಇದೀಗ ತನ್ನ ಮೊದಲ ಹೆಜ್ಜೆಯನ್ನಿಟ್ಟುದ್ದು, ಸೂಕ್ತ ಕಾರಣ ನೀಡದೇ ತಲ್ಲಾಖ್ ನೀಡಿದರೆ ಅಂತಹವರನ್ನು ಸಮಾಜದಿಂದಲೇ ಬಹಿಷ್ಕರಿಸಲಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿದೆ.
ಇದೇ ವೇಳೆ ತ್ರಿವಳಿ ತಲ್ಲಾಖ್ ಬಗ್ಗೆ ಮಾಧ್ಯಮಗಳಲ್ಲಿ ಎದ್ದಿರುವ ಚರ್ಚೆ ಕುರಿತಂತೆ ಮಾತನಾಡಿದ ಮುಸ್ಲಿಂ ಕಾನೂನು ಮಂಡಳಿ, ತಲ್ಲಾಖ್ ಪದ್ಧತಿ ಬಗ್ಗೆ ಕೆಲ ತಪ್ಪು ಗ್ರಹಿಕೆಗಳಿದ್ದು, ಇದನ್ನು ನಿವಾರಣೆ ಮಾಡುವ ಸಲುವಾಗಿಯೇ ಕೆಲ ನೀತಿ ಸಂಹಿತೆಗಳನ್ನು ಜಾರಿ ಮಾಡಲು ಮಂಡಳಿ ಮುಂದಾಗಿದೆ ಎಂದು ಹೇಳಿದೆ.
ನಿನ್ನೆಯಷ್ಟೇ ವಿವಾದಕ್ಕೀಡಾಗಿರುವ ಈ ವಿಚಾರದ ಬಗ್ಗೆ ತಾನೇ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದ ಮಂಡಳಿ ಹೊರಗಿನವರ ಹಸ್ತಕ್ಷೇಪ ಬೇಡ ಎಂದು ಹೇಳಿತ್ತು. ಮಂಡಳಿಯ ಕಾರ್ಯಕಾರಿ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಮಂಡಳಿಯ ನಿವೃತ್ತ ಅಧಿಕಾರಿ ಮೌಲಾನಾ ಖಲೀದ್ ಆರ್ ಫಿರಂಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


