ಕಾಲು ಕಳೆದುಕೊಂಡ ಮಹಿಳೆಗೆ ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ಬಾಂಬೆ ಹೈಕೋರ್ಟ್ ಆದೇಶ
ಎರಡು ವರ್ಷಗಳ ಹಿಂದೆ ರೈಲು ಹತ್ತುವಾಗ ಕಾಲು ಕಳೆದುಕೊಂಡ ಮಹಿಳೆಗೆ ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ಬಾಂಬೆ ಹೈಕೋರ್ಟ್ ಆದೇಶಿಸಿದೆ....

Published On :
ಮುಂಬಯಿ: ಎರಡು ವರ್ಷಗಳ ಹಿಂದೆ ರೈಲಿನಿಂದ ಇಳಿಯುವಾಗ ಕಳೆದುಕೊಂಡ ಮಹಿಳೆಗೆ ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.
ಖಂಡಲಾ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲು ಹತ್ತುವ ವೇಳೆ ಮಹಿಳೆಯೊಬ್ಬರು ಜಾರಿ ಬಿದ್ದು ಎರಡು ಕಾಲುಗಳನ್ನು ಕಳೆದು ಕೊಂಡಿದ್ದರು.
ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಅಭಯ್ ಓಕಾ ಮತ್ತು ಅನಿಲ್ ಮೆನನ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಪರಿಹಾರ ನೀಡುವಂತೆ ಆದೇಶಿಸಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ತಾಂತ್ರಿಕ ಸಮಸ್ಯೆಯ ಬಗ್ಗೆ ತಿಳಿಸಿರುವ ರೈಲ್ವೆ, ಪರಿಹಾರಕ್ಕಾಗಿ ಮಹಿಳೆಯು ರೈಲ್ವೆ ಪರಿಹಾರ ಮಂಡಳಿಗೆ ಅಪೀಲು ಹೋಗಲು ಅವಕಾಶ ಇದೆ ಎಂದು ತಿಳಿಸಿದೆ.
ಫೆಬ್ರವರಿ 9 2015 ರಂದು ನಾನು ಪ್ರಯಾಣಿಸುತ್ತಿದ್ದ ಬೋಗಿಗೆ ನುಗ್ಗಿದ ಕಳ್ಳರು ನನ್ನ ಬಳಿಯಿದ್ದ ಪರ್ಸ್ ಕಸಿಯಲು ಯತ್ನಿಸಿದರು. ಈ ವೇಳೆ ನಾನು ಅವರಿಂದ ತಪ್ಪಿಸಿಕೊಳ್ಳಲು ಓಡಲು ಯತ್ನಿಸಿದೆ. ಈ ವೇಳೆ ಆಕೆ ಪ್ರಯಾಣಿಸುತ್ತಿದ್ದ ಸಿಕಂದರಾಬಾದ್ - ರಾಜ್ ಕೋಟ್ ಎಕ್ಸ್ ಪ್ರೆಸ್ ರೈಲು ಖಂಡಲಾ ಸ್ಟೇಷನ್ ನಲ್ಲಿ ಸ್ವಲ್ಪ ಕಾಲ ತಂಗಿತ್ತು, ಮಹಿಳೆ ಶೇಜಲ್ ಲಡೋಲಾ ಕಳ್ಳರಿಂದ ತಪ್ಪಿಸಿಕೊಳ್ಳಲು ರೈಲಿನಿಂದ ಇಳಿಯುವಾಗ ರೈಲು ಚಲಿಸಲು ಆರಂಭಿಸಿತು. ಈ ವೇಳೆ ನಡೆದ ದುರಂತದಲ್ಲಿ ಆಕೆ ಕಾಲುಗಳನ್ನು ಕಳೆದುಕೊಂಡರು.
ತನ್ನ ಚಿಕಿತ್ಸಾ ವೆಚ್ಚಕ್ಕಾಗಿ ಪರಿಹಾರ ಮತ್ತು ರಾತ್ರಿ ಹೊತ್ತು ಸಂಚರಿಸುವ ರೈಲಿನಲ್ಲಿ ಪ್ರಯಾಣಿಕರಿಗೆ ರಕ್ಷಣೆ ನೀಡಬೇಕೆಂದು ಮಹಿಳೆ ಮನವಿ ಸಲ್ಲಿಸಿದ್ದರು, ಪ್ರಯಾಣಿಕರಿಗೆ ರಕ್ಷಣೆ ನೀಡುವಲ್ಲಿ ರೈಲ್ವೆ ಇಲಾಖೆ ವಿಫಲವಾಗಿದೆ ಎಂಬುದನ್ನು ಕೋರ್ಟ್ ಗಮನಿಸಿತ್ತು. ಹೀಗಾಗಿ ಆಕೆಗೆ ಪರಿಹಾರ ನೀಡುವಂತೆ ಆದೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
WomenಮಹಿಳೆCompensationBombay High Courtಬಾಂಬೆ ಹೈಕೋರ್ಟ್ಪರಿಹಾರKhandala railway stationಖಾಂಡ್ಲಾ ರೈಲ್ವೆ ನಿಲ್ದಾಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


