ಅಫ್ಘಾನಿಸ್ತಾನದ ಮೇಲೆ ಅತೀ ದೊಡ್ಡ ಬಾಂಬ್ ದಾಳಿ: ಅಮೆರಿಕಾ ಕ್ರಮಕ್ಕೆ ಭಾರತೀಯ ನಾಯಕರ ಮೆಚ್ಚುಗೆ
ಆಫ್ಘಾನಿಸ್ತಾದನ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಡಗು ತಾಣಗಳ ಮೇಲೆ ಅತೀ ದೊಡ್ಡ ಬಾಂಬ್ ದಾಳಿ ನಡೆಸಿರುವ ಹಿನ್ನಲೆಯಲ್ಲಿ ಅಮೆರಿಕವನ್ನು ಭಾರತೀಯ ರಾಜಕೀಯ ನಾಯಕರು...

Published On :
ನವದೆಹಲಿ: ಆಫ್ಘಾನಿಸ್ತಾದನ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಡಗು ತಾಣಗಳ ಮೇಲೆ ಅತೀ ದೊಡ್ಡ ಬಾಂಬ್ ದಾಳಿ ನಡೆಸಿರುವ ಹಿನ್ನಲೆಯಲ್ಲಿ ಅಮೆರಿಕವನ್ನು ಭಾರತೀಯ ರಾಜಕೀಯ ನಾಯಕರು ಕೊಂಡಾಡಿದ್ದಾರೆ.
ಅಮೆರಿಕ ಸೇನೆ ನಿನ್ನೆ ಆಫ್ಘಾನಿಸ್ತಾನದ ಅಚಿನ್ ಜಿಲ್ಲೆಯ ನಂಗರ್ಹಾರ್ ಪ್ರದೇಶದ ಮೇಲೆ ವಿಶ್ವದ 2ನೇ ಅತೀದೊಡ್ಡ ಬಾಂಬ್ ಮೊಅಬ್ ( ಮದರ್ ಆಫ್ ಆಲ್ ಬಾಂಬ್ಸ್) ದಾಳಿ ನಡೆಸಿತ್ತು. ಈ ವೇಳೆ ಹಲವು ಇಸಿಸ್ ಉಗ್ರರು ಸಾವನ್ನಪ್ಪಿದ್ದರು.
ಇಸಿಸ್ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಕಠಿಣ ಕ್ರಮ ಕೈಗೊಂಡಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಭಾರತೀಯ ರಾಜಕೀಯ ನಾಯಕರು ಅಮೆರಿಕವನ್ನು ಹೊಗಳಿದ್ದಾರೆ.
ಅಫ್ಘಾನಿಸ್ತಾನದ ಮೇಲೆ ಅತೀ ದೊಡ್ಡ ಬಾಂಬ್ ದಾಳಿ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು, ಅಫ್ಘಾನಿಸ್ತಾನದ ಇಸಿಸ್ ಉಗ್ರರ ಅಡಗುತಾಣಗಳ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮದರ್ ಆಫ್ ಆಲ್ ಬಾಂಬ್ ದಾಳಿ ಮಾಡಿರುವುದು ಅತ್ಯುತ್ತಮವಾಗಿದೆ. ಅಮೆರಿಕ, ಇಸ್ರೇಲ್, ಭಾರತ ಉಗ್ರರ ವಿರುದ್ಧ ಹೋರಾಟ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದೇ ರೀತಿ ಕಾಂಗ್ರೆಸ್ ನಾಯಕ ಮನೀಷ್ ತಿವಾರಿಯವರೂ ಕೂಡ ಪ್ರತಿಕ್ರಿಯೆ ನೀಡಿದ್ದು, ಭಯೋತ್ಪಾದನಾ ಸಂಘಟನೆಗಳ ಅಭಿವೃದ್ಧಿಗೆ ಅಂತ್ಯ ಹಾಡಲು ಮತ್ತಷ್ಟು ಕಠಿಣ ಕ್ರಮಗಳ ಅಗತ್ಯವಿದೆ. ಆಫ್ಘಾನಿಸ್ತಾನದ ಇಸಿಸ್ ಉಗ್ರರ ಅಡಗುತಾಣಗಳ ಮೇಲೆ ಅಮೆರಿಕ ಮೊಅಬ್ ದಾಳಿ ನಡೆಸಿದೆ ಎಂದರೆ, ಎಲ್ಇಟಿ, ಜೈಶ್-ಇ-ಮೊಹಮ್ಮದ್, ಜಮ್ಮತ್-ಉಲ್-ದವಾ ಉಗ್ರ ಸಂಘಟನೆಗಳ ನಡುವಿನ ವ್ಯತ್ಯಾಸವೇನಿದೆ? ಮುರಿದ್ಕೆ ಮೇಲೆ ಒಂದು ದಾಳಿ ಏಕೆ ಆಗಬಾರದು? ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


