ದೇಶ

ಜಾಧವ್ ಜೀವಂತವಾಗಿರುವ ಬಗ್ಗೆ ತಿಳಿಯಲು ಸರ್ಕಾರ ಪಾಕ್ ಕೋರ್ಟ್ ಮೊರೆ ಹೋಗಲಿ: ಬಕ್ಷಿ

ಗೂಢಚಾರಿಕೆ ಮಾಡಿದೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಕುಲಭೂಷಣ್....

ಜಾಧವ್ ಜೀವಂತವಾಗಿರುವ ಬಗ್ಗೆ ತಿಳಿಯಲು ಸರ್ಕಾರ ಪಾಕ್ ಕೋರ್ಟ್ ಮೊರೆ ಹೋಗಲಿ: ಬಕ್ಷಿ
ಕುಲಭೂಷಣ್ ಜಾಧವ್
Published On :
ನವದೆಹಲಿ: ಗೂಢಚಾರಿಕೆ ಮಾಡಿದೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಕುಲಭೂಷಣ್ ಜಾಧವ್ ಅವರು ಜೀವಂತವಾಗಿರುವ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಪಾಕಿಸ್ತಾನ ಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುವಂತೆ ನಿವೃತ್ತ ಮೇಜರ್ ಜನರಲ್ ಜಿ.ಡಿ.ಬಕ್ಷಿ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಜಾಧವ್ ಜೀವಂತವಾಗಿರುವ ಬಗ್ಗೆ ಅನುಮಾನ ವ್ಯಕ್ತಿಪಡಿಸಿರುವ ಬಕ್ಷಿ ಅವರು, ಪಾಕಿಸ್ತಾನ ಈಗಾಗಲೇ ಕುಲಭೂಷಣ್ ಜಾಧವ್ ಗೆ ಚಿತ್ರ ಹಿಂಸೆ ನೀಡಿ ಸಾಯಿಸಿರುವ ಸಾಧ್ಯತೆ ಇದ್ದು, ಈಗ ಅದನ್ನು ನ್ಯಾಯಾಂಗ ಹತ್ಯೆ ಎಂದು ಬಿಂಬಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಹಿರಿಯರ ಭಾರತ ಆಯೋಜಿಸಿದ್ದ ರಾಷ್ಟ್ರೀಯತೆ ಮತ್ತು ದೇಶಭಕ್ತಿ ಕುರಿತ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಮಾತನಾಡಿದ ಬಕ್ಷಿ, ಜಾಧವ್ ಅವರನ್ನು ಅಪಹರಿಸಿ ಬಲೋಚಿಸ್ಥಾನಕ್ಕೆ ಕರೆದುಕೊಂಡು ಹೋಗಿ, ಸುಳ್ಳು ಆರೋಪ ಹೊರೆಸಿ ತಪ್ಪೊಪ್ಪಿಕೊಳ್ಳುವಂತೆ ಚಿತ್ರ ಹಿಂಸೆ ನೀಡಿದ್ದಾರೆ. ಆದರೂ ಅವರು ಒಪ್ಪಿಕೊಂಡಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಾಧವ್ ಅವರಿಗೆ ಚಿತ್ರ ಹಿಂಸೆ ನೀಡಿ ಸಾಯಿಸಿರುವ ಬಗ್ಗೆ ನಮಗೆ ಶಂಕೆ ಇದೆ. ಹೀಗಾಗಿಯೇ ಯಾವುದೇ ವಿಚಾರಣೆ ಇಲ್ಲದೆ ಸೇನಾ ನ್ಯಾಯಾಲಯದ ಮೂಲಕ ಗಲ್ಲು ಶಿಕ್ಷೆ ನೀಡಿ, 'ನ್ಯಾಯಾಂಗ ಹತ್ಯೆ'ಯಾಗಿ ಬಿಂಬಿಸಲಾಗುತ್ತಿದೆ ಎಂದು ನಿವೃತ್ತ ಮೇಜರ್ ಜನರಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.