ಚೆನ್ನೈ: ನಟಿ ರಾಧಿಕಾ ಅವರ ರಡಾನ್ ಮೀಡಿಯಾ ನೆಟ್ ವರ್ಕ್ ಹಾಗೂ ಮನೆ ಮೇಲೆ ಐಟಿ ದಾಳಿ
ನಟ, ರಾಜಕಾರಣಿ ಶರತ್ ಕುಮಾರ್ ಅವರ ನಿವಾಸದ ಮೇಲೆ ಐಟಿ ದಾಳಿ ನಡೆಸಿದ ನಾಲ್ಕೆ ದಿನಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ...

Published On :
ಚೆನ್ನೈ: ನಟ, ರಾಜಕಾರಣಿ ಶರತ್ ಕುಮಾರ್ ಅವರ ನಿವಾಸದ ಮೇಲೆ ಐಟಿ ದಾಳಿ ನಡೆಸಿದ ನಾಲ್ಕೆ ದಿನಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ಅವರ ಪತ್ನಿ ರಾಧಿಕಾ ಅವರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.
ವರದಿಗಳ ಪ್ರಕಾರ ಐಟಿ ಅಧಿಕಾರಿಗಳು ತಮಿಳು ನಾಡಿನ ಹಲವಾರು ವಿವಿಐಪಿಗಳ ನಿವಾಸದ ಮೇಲೆ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ.
ನಟಿ ರಾಧಿಕಾ ಶರತ್ ಕುಮಾರ್ ಅವರ ರಡಾನ್ ಮೀಡಿಯಾ ನೆಟ್ ವರ್ಕ್ ಮೇಲೂ ದಾಳಿ ನಡೆಸಲಾಗಿದೆ, ಈ ಹಿಂದೆಯೇ ಐಟಿ ಅಧಿಕಾರಿಗಳ ಸ್ಕ್ಯಾನರ್‌ಗೆ ಒಳಪಟ್ಟಿದ್ದ ಶರತ್ ಕುಮಾರ್ - ರಾಧಿಕಾ ಅವರ ನಿವಾಸವನ್ನು ಶೋಧಿಸಿದ್ದಾರೆ.
ಕಳೆದ ವಾರದಲ್ಲಿ ತಮಿಳು ನಾಡು ಆರೋಗ್ಯ ಮಂತ್ರಿ ವಿಜಯಭಾಸ್ಕರ್, ಮಾಜಿ ಸಂಸದ ಸಿ ರಾಜೇಂದ್ರನ್ ಮತ್ತು ಎಂಜಿಆರ್ ಮೆಡಿಕಲ್ ಯುನಿವರ್ಸಿಟಿ ವಿಸಿ ಡಾ. ಗೀತಾಲಕ್ಷೀ ಅವರ ನಿವಾಸಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಆರ್ ನಗರ ಉಪಚುನಾವಣೆಯಲ್ಲಿ ಶಶಿಕಲಾ ಬಣದ ಎಐಎಡಿಎಂಕೆ ಅಭ್ಯರ್ಥಿ ಟಿ ಟಿ ವಿ ದಿನಕರನ್ ಅವರ ಪರವಾಗಿ ಅಪಾರ ಮೊತ್ತದ ಹಣವನ್ನು ಬಳಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಆಧರಿಸಿ ಐಟಿ ಅಧಿಕಾರಿಗಳು ತಮಿಳು ನಾಡಿನ ವಿವಿಐಪಿ ಗಳ ನಿವಾಸಗಳ ಮೇಲೆ ದಾಳಿ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಶಶಿಕಲಾ ಬಣದ ಎಐಎಡಿಎಂಕೆ ಅಭ್ಯರ್ಥಿ ಟಿಟಿವಿ ದಿನಕರನ್ ಶರತ್ ಕುಮಾರ್ ಅವರಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ರಾಧಿಕಾ ಶರತ್ ಕುಮಾರ್ಐಟಿ ದಾಳಿIT raidSarathkumarRadikaa SarathkumarRadaan Media Networkಶರಕ್ ಕುಮಾರ್ರಡಾನ್ ಮೀಡಿಯಾ ನೆಟ್ ವರ್ಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


