ಬ್ಯಾಟರಿ ಉತ್ಪಾದಕ ಸಂಸ್ಥೆಗಳಿಗೆ ಇಸ್ರೋದಿಂದ ಲಿಥಿಯಂ-ಇಯೋನ್ ಬ್ಯಾಟರಿ ತಂತ್ರಜ್ಞಾನ
ದೇಶಿಯ ಲಿಥಿಯಂ-ಇಯೋನ್ ಬ್ಯಾಟರಿ ಉತ್ಪಾದನೆ ಮಾಡಲು ಆಸಕ್ತಿಯುಳ್ಳ ಸಂಸ್ಥೆಗಳಿಗೆ ತಂತ್ರಜ್ಞಾನ ಹಂಚಿಕೆ ಮಾಡುವುದಕ್ಕೆ ಇಸ್ರೋ ಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.

Published On :
ನವದೆಹಲಿ: ದೇಶಿಯ ಲಿಥಿಯಂ-ಇಯೋನ್ ಬ್ಯಾಟರಿ ಉತ್ಪಾದನೆ ಮಾಡಲು ಆಸಕ್ತಿಯುಳ್ಳ ಸಂಸ್ಥೆಗಳಿಗೆ ತಂತ್ರಜ್ಞಾನ ಹಂಚಿಕೆ ಮಾಡುವುದಕ್ಕೆ ಇಸ್ರೋ ಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.
ಬೃಹತ್ ಪ್ರಮಾಣದ ಬ್ಯಾಟರಿ ಉತ್ಪಾದನೆ ಮಾಡಲು ಖಾಸಗಿ ಸಂಸ್ಥೆಗಳಿಗೂ ಇಸ್ರೋದ ತಂತ್ರಜ್ಞಾನ ಸುಲಭವಾಗಿ ದೊರೆಯಲಿದೆ. ಆಟೋಮೊಬೈಲ್ ಗಳಲ್ಲಿ ಬಳಕೆ ಮಾಡಲು ಅಥವಾ ವಿದ್ಯುತ್ ಚಾಲಿತ ವಾಹನಗಳಿಗೆ ಅಳವಡಿಸುವ ಹೆಚ್ಚು ಶಕ್ತಿಯುಳ್ಳ (ಹೈ ಪವರ್) ದೇಶಿಯ ಲಿಥಿಯಂ-ಇಯೋನ್ ಬ್ಯಾಟರಿಗಳ ತಂತ್ರಜ್ಞಾನವನ್ನು ಇಸ್ರೋ ನೇತೃತ್ವದ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಅಭಿವೃದ್ಧಿಪಡಿಸಿದ್ದು, ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.
ಬ್ಯಾಟರಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಈ ವರೆಗೆ 6 ಕ್ಕೂ ಹೆಚ್ಚು ಪ್ರಮುಖ ಆಟೋಮೊಬೈಲ್ ಸಂಸ್ಥೆಗಳು, ಬ್ಯಾಟರಿ ಉತ್ಪಾದನೆ ಸಂಸ್ಥೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಇಸ್ರೋ ಸಂಸ್ಥೆಯನ್ನು ಸಂಪರ್ಕಿಸಿದ್ದು, ಮಹೇಂದ್ರ ರೆನಾಲ್ಟ್, ಹ್ಯೂಂಡೈ, ನಿಸಾನ್, ಟಾಟಾ ಮೋಟಾರ್ಸ್, ಹೈ ಎನರ್ಜಿ ಬ್ಯಾಟರಿಸ್ ಬಿಹೆಚ್ ಇಎಲ್ ಹಾಗೂ ಇಂಡಿಯನ್ ಆಯಿಲ್ ಸಂಸ್ಥೆಗಳು ಇಸ್ರೋ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದಿಂದ ಲಿಥಿಯಂ-ಇಯೋನ್ ಬ್ಯಾಟರಿ ಉತ್ಪಾದನೆಗೆ ಆಸಕ್ತಿ ತೋರಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


