ದೇಶ

ಮಹಿಳೆಯರ ವಿರುದ್ಧ ಹಿಂಸಾಚಾರ ಹೆಚ್ಚಲು ಸಿನಿಮಾಗಳು ಕಾರಣ: ಮನೇಕಾ ಗಾಂಧಿ

ದೇಶದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳು ಹೆಚ್ಚಾಗಲು ಸಿನಿಮಾಗಳು ಕಾರಣವಾಗಿದ್ದು, ಚಲನಚಿತ್ರಗಳಲ್ಲಿ...

ಮಹಿಳೆಯರ ವಿರುದ್ಧ ಹಿಂಸಾಚಾರ ಹೆಚ್ಚಲು ಸಿನಿಮಾಗಳು ಕಾರಣ: ಮನೇಕಾ ಗಾಂಧಿ
ಮನೇಕಾ ಗಾಂಧಿ
Published On :
ಪಣಜಿ: ದೇಶದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳು ಹೆಚ್ಚಾಗಲು ಸಿನಿಮಾಗಳು ಕಾರಣವಾಗಿದ್ದು, ಚಲನಚಿತ್ರಗಳಲ್ಲಿ ಮಹಿಳೆಯರನ್ನು ಸರಿಯಾದ ರೀತಿಯಲ್ಲಿ ತೋರಿಸಿ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ ಒತ್ತಾಯಿಸಿದ್ದಾರೆ.
ತಮಗೆ ಬೇಕಾದಂತೆ ಮಾಡಬಹುದು ಎಂದು ಕೆಲವು ಪುರುಷರು ಮಹಿಳೆಯರ ವಿರುದ್ಧ ಹಿಂಸಾಚಾರ ನಡೆಸಲು ಕಾರಣ ಚಲನಚಿತ್ರಗಳಾಗಿವೆ. ಸಮಾಜಕ್ಕೆ ಸಂದೇಶಗಳನ್ನು ಸಾರುವ ಸಿನಿಮಾಗಳನ್ನು ನೀವು ನೋಡಿದರೆ ಗೊತ್ತಾಗುತ್ತದೆ, ಗಂಡು-ಹೆಣ್ಣಿನಲ್ಲಿ ಪ್ರೀತಿಯೆಂಬುದು ಹುಡುಗಿಯನ್ನು ಹುಡುಗ ಚುಡಾಯಿಸುವ ಮೂಲಕ ಆರಂಭವಾಗುತ್ತದೆ. ಯುವಕ ಮತ್ತು ಆತನ ಸ್ನೇಹಿತರು ಯುವತಿಯ ಸುತ್ತ ಸುತ್ತುವರಿಯುತ್ತಾರೆ, ಆಕೆಗೆ ಮುಜುಗರವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ.ಚಿತ್ರದ ನಾಯಕ ನಾಯಕಿಯನ್ನು ಸ್ಪರ್ಷಿಸುತ್ತಾನೆ. ನಂತರ ನಿಧಾನವಾಗಿ ನಾಯಕಿ ನಾಯಕನ ಪ್ರೀತಿಯ ಬಲೆಗೆ ಬೀಳುತ್ತಾಳೆ. ಇಂತಹ ದೃಶ್ಯಗಳನ್ನೇ ಬಹುತೇಕ ಚಿತ್ರಗಳಲ್ಲಿ ತೋರಿಸುವುದು ಎಂದು ಸಚಿವೆ ಗೋವಾ ಫೆಸ್ಟ್ ನಲ್ಲಿ ಹೇಳಿದರು.
ಬಾಲಿವುಡ್ ಮತ್ತು ಸ್ಥಳೀಯ ಭಾಷೆಗಳ ಚಿತ್ರಗಳಲ್ಲಿ ಮಹಿಳೆಯರನ್ನು ಅಸಭ್ಯವಾಗಿ ತೋರಿಸುತ್ತಾರೆ. ಇದು ಸಮಾಜದ ಪುರುಷರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ  ಎಂದು ಹೇಳಿದರು.
ಪುರುಷರ ಬಲಹೀನತೆ ಕೂಡ ಹಿಂಸಾಚಾರ ಹೆಚ್ಚಾಗಲು ಕಾರಣವಾಗಿದೆ. ತಾನು ಮಾಡುವ ಕೆಲಸದಲ್ಲಿ ವೈಫಲ್ಯ, ಉದ್ಯೋಗ ಸಿಗದಿರುವುದು, ಆರ್ಥಿಕ ಸಮಸ್ಯೆ ಕೂಡ ಮಹಿಳೆಯರ ವಿರುದ್ಧದ ಹಿಂಸಾಚಾರ ಹೆಚ್ಚಾಗಲು ಕಾರಣವಾಗುತ್ತವೆ ಎಂದು ಮನೇಕಾ ಗಾಂಧಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.