ಬಾಂಗ್ಲಾ ಮಿಲಿಟರಿಗೆ ಭಾರತದಿಂದ 500 ಮಿಲಿಯನ್ ಡಾಲರ್ ನೆರವಿನ ಭರವಸೆ
ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಏ.8 ರಂದು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಏ.8 ರಂದು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಮಾತುಕತೆ ನಂತರ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಬಾಂಗ್ಲಾದೇಶದ ಮಿಲಿಟರಿಗೆ ಭಾರತ 500 ಮಿಲಿಯನ್ ಡಾಲರ್ ನೆರವು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಬಾಂಗ್ಲಾದ ಅಭಿವೃದ್ಧಿಯನ್ನು ಭಾರತ ಎಂದಿಗೂ ಬೆಂಬಲಿಸುತ್ತದೆ. ಬಾಂಗ್ಲಾದ ಅಭಿವೃದ್ಧಿಯಲ್ಲಿ ಭಾರತ ಪ್ರಮುಖವಾದ ಪಾಲುದಾರ ದೇಶವಾಗಿದೆ ಎಂದು ಮೋದಿ ಹೇಳಿದ್ದಾರೆ.
ಬಾಂಗ್ಲಾದೇಶದೊಂದಿಗೆ ಹೊಸ ಕ್ಷೇತ್ರಗಳಲ್ಲಿ ಭಾರತ ಸಹಕಾರವನ್ನು ವೃದ್ಧಿಸುವ ಉದ್ದೇಶ ಹೊಂದಿದೆ. ಪ್ರಮುಖವಾಗಿ ಐಟಿ, ಸೈಬರ್, ಭದ್ರತೆ, ಹೈ-ಟೆಕ್ನಾಲಜಿ, ಸಿವಿಲ್ ನ್ಯೂಕ್ಲಿಯರ್ ಎನರ್ಜಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ
ಬಾಂಗ್ಲಾದೊಂದಿಗಿನ ಸಹಕಾರವನ್ನು ವೃದ್ಧಿಸುವ ಯೋಜನೆ ಹೊಂದಿದೆ ಎಂದು ಮೋದಿ ತಿಳಿಸಿದ್ದಾರೆ.
500 ಮಿಲಿಯನ್ ಡಾಲರ್ ನೊಂದಿಗೆ ಬಾಂಗ್ಲಾದೇಶದಲ್ಲಿ ಜಾರಿಯಾಗಬೇಕಿರುವ ಯೋಜನೆಗಳಿಗಾಗಿ ಭಾರತ $4.5 ಬಿಲಿಯನ್ ನಷ್ಟು ಪ್ರತ್ಯೇಕ ನೆರವು ನೀಡುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ದ್ವಿಪಕ್ಷೀಯ ಮಾತುಕತೆಯ ನಂತರ ಭಾರತ-ಬಾಂಗ್ಲಾದೇಶ 20 ಒಪ್ಪಂದಗಳಿಗೆ ಸಹಿ ಹಾಕಿವೆ.
ಉಭಯ ಪ್ರಧಾನಿಗಳಿಂದ ರೈಲ್ವೆ, ರಸ್ತೆ ಸಂಪರ್ಕ ಯೋಜನೆಗಳ ಉದ್ಘಾಟನೆ
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ವಿಡಿಯೋ ಕಾನ್ಫರೆನ್ಸ್ ಮೂಲಕ ಬಾಂಗ್ಲಾದಿಂದ ಕೋಲ್ಕತ್ತಾಗೆ ತೆರಳುವ ಖುಲ್ನಾ-ಕೋಲ್ಕತ್ತಾ ಮೈತ್ರಿ ಎಕ್ಸ್ ಪ್ರೆಸ್ ಹಾಗೂ ಕೋಲ್ಕತ್ತಾ-ಖುಲ್ನಾ-ಢಾಕಾ ಬಸ್ ಸಂಪರ್ಕ ಸೇವೆ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.2016 ರ ಅಕ್ಟೋಬರ್ 30-31 ರಂದು ಬಸ್ ಸೇವೆಯ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿBilateral talksದ್ವಿಪಕ್ಷೀಯ ಮಾತುಕತೆBangladesh PM Sheikh Hasinaಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


