ಭಾರತದಲ್ಲಿ ಬಾಂಗ್ಲಾ ಅಲ್ಪಸಂಖ್ಯಾತರ ಬಗ್ಗೆ ವಿಚಾರಣೆ ನಡೆಸಲಿರುವ ಸಾಂವಿಧಾನಿಕ ಪೀಠ
ಬಾಂಗ್ಲಾದ ಅಲ್ಪಸಂಖ್ಯಾತರಿಗೆ ಭಾರತದ ನಾಗರಿಕರ ಸ್ಥಾನ ಮಾನ ನೀಡುವುದರ ಕುರಿತ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.

Published On :
ನವದೆಹಲಿ: ಬಾಂಗ್ಲಾದ ಅಲ್ಪಸಂಖ್ಯಾತರಿಗೆ ಭಾರತದ ನಾಗರಿಕರ ಸ್ಥಾನ ಮಾನ ನೀಡುವುದರ ಕುರಿತ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
ಅಸ್ಸಾಂ, ಪಶ್ಚಿಮ ಬಂಗಾಳ, ಮೇಘಾಲಯ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಅಲ್ಪಸಂಖ್ಯಾತರನ್ನು ವಾಪಸ್ ಕಳಿಸಬಾರದೆಂದು ಕೇಂದ್ರ ಹಾಗೂ ಅಸ್ಸಾಂ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು ಎನ್ ಜಿಒ ಸ್ವಜನ್, ಬಿಮಾಲಂಗ್ಷು ರಾಯ್ ಫೌಂಡೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಗದೀಶ್ ಸಿಂಗ್ ಖೇಹರ್ ಹಾಗೂ ನ್ಯಾ. ಡಿವೈ ಚಂದ್ರಚೂಡ್ ಅವರಿದ್ದ ಸುಪ್ರೀಂ ಕೋರ್ಟ್ ನ ನ್ಯಾಯಪೀಠ ಅರ್ಜಿಯ ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿದೆ.
ಭಾರತದಲ್ಲಿ ಹುಟ್ಟಿರುವ ಬಾಂಗ್ಲಾದೇಶದ ಅಲ್ಪಸಂಖ್ಯಾತರ ಮಕ್ಕಳು ಈಗಿನ ಕಾನೂನಿನ ಪ್ರಕಾರ ಇಲ್ಲಿನ ನಾಗರಿಕರ ಸೌಲಭ್ಯಗಳನ್ನು ಪಡೆಯಬಹುದೇ ಎಂಬ ವಿಚಾರದ ಬಗ್ಗೆಯೂ ಸಾಂವಿಧಾನಿಕ ಪೀಠವೇ ತೀರ್ಪು ನೀಡಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮೇ.11 ರಂದು ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ನ ಸಾಂವಿಧಾನ ಪೀಠದಲ್ಲಿ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtಸುಪ್ರೀಂ ಕೋರ್ಟ್constitution benchಸಾಂವಿಧಾನಿಕ ಪೀಠBangladesh minority communitiesಬಾಂಗ್ಲಾ ಅಲ್ಪಸಂಖ್ಯಾತರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


